HEALTH TIPS

ಮಹಿಳೆ ಸಬಲೀಕರಣ ಯೋಜನೆ-ಕಾಸರಗೋಡು ಜಿಲ್ಲೆಯಲ್ಲಿ ಚಾಲನೆ

 

           

                   ಕಾಸರಗೋಡು: ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕೇರಳ ಮಹಿಳಾ ಸಮಖ್ಯ ಸೊಸೈಟಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ 'ಮುಂದೆಸಾಗುವ' ಯೋಜನೆ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಕಾಂಞಂಗಾಡ್ ತಾಲೂಕು ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

                     ಶಾಸಕ ಇ.ಚಂದ್ರಶೇಖರನ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಞಂಗಾಡು ಪುರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು.

            ಮುಖ್ಯ ಅತಿಥಿಯಾಗಿ  ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಭಾಗವಹಿಸಿದ್ದರು. ಮಾಖ್ಯ ಸಹ ನಿರ್ದೇಶಕಿ ಎಲ್.ರಮಾದೇವಿ, ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಹೊಸದುರ್ಗ ತಹಸೀಲ್ದಾರ್ ಉಣ್ಣಿಕೃಷ್ಣನ್, ಕಾಸರಗೋಡು ಜೆಎಸ್‍ಡಿಡಿಒ ಪಿ.ದಿನೇಶ್ ಕುಮಾರ್, ಪರಪ್ಪ ಬ್ಲಾಕ್ ಎಟಿಡಿಒ ಒ.ಮಧುಸೂದನನ್ ಉಪಸ್ಥಿತರಿದ್ದರು. ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ವಿಷಯ ಮಂಡಿಸಿದರು. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಎನ್.ಪಿ.ಅಜೀರ ಸ್ವಾಗತಿಸಿದರು. ಮಹಿಳಾ ಸಮಾಖ್ಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎ.ಅನೀಸಾ ವಂದಿಸಿದರು.

             ಮುಂದೆಸಾಗುವ ಯೋಜನೆ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಮತ್ತು ಕೇರಳ ಮಹಿಳಾ ಸಮಖ್ಯ ಸೊಸೈಟಿ ಜಂಟಿಯಾಗಿ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ನಡೆಸುತ್ತಿರುವ ಯೋಜನೆಯಾಗಿದೆ. ಕಾಸರಗೋಡು, ಕಣ್ಣೂರು, ವಯನಾಡ್, ಪಾಲಕ್ಕಾಡ್, ಮಲಪ್ಪುರಂ, ಪತ್ತನಂತಿಟ್ಟ, ಇಡುಕ್ಕಿ ಮತ್ತು ತಿರುವನಂತಪುರಂ ಮಹಿಳಾ ಸಮಾಖ್ಯ ಸೊಸೈಟಿಯ ಕಾರ್ಯಾಚರಣಾ ಪ್ರದೇಶವಾಗಿದೆ.ಯೋಜನೆಯ ಅನುಷ್ಠಾನ. ಯೋಜನೆಯನ್ವಯ 4ನೇ ತರಗತಿ, 7ನೇ ತರಗತಿ, 10ನೇ ತರಗತಿ ಮತ್ತು ಪ್ಲಸ್ ಒನ್ ಸಮಾನತೆಯ ಕೋರ್ಸ್‍ಗಳಿಗೆ ದಾಖಲಾಗಲು ಷರತ್ತುಗಳನ್ನು ಸಿದ್ಧಪಡಿಸಿ ಉನ್ನತ ವ್ಯಾಸಂಗ ಮತ್ತು ಉದ್ಯೋಗಾವಕಾಶಗಳಿಗೆ ಅರ್ಹರನ್ನಾಗಿಸುತ್ತಿದೆ. ಈ ಸಂಬಂಧ ಮಹಿಳಾ ಸಮಖ್ಯ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಪರಪ್ಪ ಬ್ಲಾಕ್‍ನಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಆಸಕ್ತ ವಿದ್ಯಾರ್ಥಿಗಳ ನೋಂದಾವಣೆಗಿರುವ ಜಿಲ್ಲಾ ಮಟ್ಟದ ಘೋಷಣಾ ಸಮಾರಂಭ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries