ನವದೆಹಲಿ: ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಇಂಟರ್ನ್‌ಶಿಪ್ ಮಾಡಬೇಕು. ಇದಕ್ಕೆ ಕ್ರೆಡಿಟ್‌ಗಳನ್ನು ನೀಡಲಾಗುತ್ತದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬಿಡುಗಡೆ ಮಾಡಿರುವ ಹೊಸ ಕರಡು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
0
samarasasudhi
ಅಕ್ಟೋಬರ್ 12, 2023
ನವದೆಹಲಿ: ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಇಂಟರ್ನ್‌ಶಿಪ್ ಮಾಡಬೇಕು. ಇದಕ್ಕೆ ಕ್ರೆಡಿಟ್‌ಗಳನ್ನು ನೀಡಲಾಗುತ್ತದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬಿಡುಗಡೆ ಮಾಡಿರುವ ಹೊಸ ಕರಡು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ಸಿದ್ಧಪಡಿಸಲಾಗಿರುವ 'ಪದವಿ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಮತ್ತು ಸಂಶೋಧನೆ ಕುರಿತ ಮಾರ್ಗಸೂಚಿಗಳು' ಕರಡನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.
ಪ್ರಾಯೋಗಿಕ ಕಲಿಕೆಗೆ ಹೆಚ್ಚು ಅವಕಾಶಗಳನ್ನು ಒದಗಿಸಬೇಕು. ಇದಕ್ಕಾಗಿ ಪದವಿ ಹಂತದ ಪಠ್ಯಕ್ರಮವು ಸಂಶೋಧನೆ ಹಾಗೂ ಇಂಟರ್ನ್‌ಶಿಪ್ ಒಳಗೊಂಡಿರಬೇಕು ಎಂಬುದಕ್ಕೆ ಒತ್ತು ನೀಡಿ, ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಯುಜಿಸಿ ಹೇಳಿದೆ.
ಪದವಿಯ 4ನೇ ಸೆಮಿಸ್ಟರ್ ನಂತರ 60 ರಿಂದ 120 ಗಂಟೆಗಳಷ್ಟು ಇಂಟರ್ನ್‌ಶಿಪ್ ಕಡ್ಡಾಯ ಎಂಬುದು ಸೇರಿದಂತೆ ಹಲವಾರು ಅಂಶಗಳನ್ನು ಕರಡು ಮಾರ್ಗಸೂಚಿಗಳು ಒಳಗೊಂಡಿವೆ.