ತಿರುವನಂತಪುರಂ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇರದೆ ಸತತ ಕುಸಿತದಲ್ಲಿ ಮುಂದುವರಿದಿದೆ. ಇಂದು ಮಾರುಕಟ್ಟೆಯಲ್ಲಿ ಒಂದು ಪವನ್ ಚಿನ್ನದ ಬೆಲೆ 42,080 ರೂ.ವರೆಗೆ ವಿಕ್ರಯಗೊಂಡಿದೆ. ನಿನ್ನೆಗಿಂತ ಇಂದು ಒಂದು ಪವನ್ ಚಿನ್ನ 480 ರೂ.ಗೆ ಕುಸಿತ ಕಂಡಿದೆ.
ಇಂದು ಮಾರುಕಟ್ಟೆಯಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,260 ರೂ. ನಿನ್ನೆಗಿಂತ ಇಂದು ಒಂದು ಗ್ರಾಂ 22ಕ್ಯಾರೆಟ್ ಚಿನ್ನಕ್ಕೆ 60 ರೂಪಾಯಿ ಇಳಿಕೆಯಾಗಿದೆ. ಫೆಬ್ರವರಿ 3 ರಿಂದ ಚಿನ್ನದ ಬೆಲೆ ಕನಿಷ್ಠ ಮಟ್ಟಕ್ಕೆ ತಲುಪಿದೆ.





