ಕೊಟ್ಟಾಯಂ: ಆರ್.ಎಸ್.ಎಸ್. ಸರಸಂಘ ಚಾಲಕ್ ಡಾ.ಮೋಹನ್ ಭಾಗವತ್ ಅವರು ಇದೇ 7ರಂದು ಕೇರಳಕ್ಕೆ ಆಗಮಿಸಲಿದ್ದಾರೆ. 10 ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಇದೇ 5, 6 ಮತ್ತು 11ರಂದು ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
5 ಮತ್ತು 6ರಂದು ಏಟುಮನೂರಿನ ನಂದವನಂ ಸಭಾಂಗಣದಲ್ಲಿ ನಡೆಯಲಿರುವ ಆರ್‍ಎಸ್‍ಎಸ್ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾರ್ಗ ದರ್ಶನ ನೀಡಲಿದ್ದಾರೆ. ಸಂಜೆ 5 ಕ್ಕೆ ಅವರು ವೈಕಂ ಸತ್ಯಾಗ್ರಹ ಶತಮಾನೋತ್ಸವದ ಅಂಗವಾಗಿ ಆರ್‍ಎಸ್‍ಎಸ್ ಕೊಟ್ಟಾಯಂ ಜಿಲ್ಲಾ ವೈಕಂ ಆಯೋಜಿಸಿರುವ ಪೂರ್ಣ ಗಣವೇಷ ಸಾಂಘಿಕ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಂತರ 9 ಮತ್ತು 10 ರಂದು ತಿರುವನಂತಪುರದಲ್ಲಿ ¸ರಸಂಘ ಚಾಲಕ್ ಡಾ. ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ನಡೆಯುವ ನಿಯಮಿತ ಸಂಘಟನಾ ಸಭೆಯಲ್ಲೂ ಭಾಗವಹಿಸಲಿದ್ದಾರೆ. ಸರಕಾರ್ಯವಾಹ 11 ರಂದು ಎರ್ನಾಕುಳಂ ತಲುಪಿ ಸಂಜೆ ಹಿಂತಿರುಗುವರು.
7ರಂದು ಸಂಜೆ 5.30ಕ್ಕೆ ಕೋಝಿಕ್ಕೋಡ್ ನ ಕೇಸರಿ ಭವನದಲ್ಲಿ ನಡೆಯುವ ಕೇಸರಿ ಅಮೃತಶತಂ ಉಪನ್ಯಾಸ ಮಾಲಿಕೆಯಲ್ಲಿ ಸರಸಂಘ ಚಾಲಕ್ ಮಾತನಾಡುವರು. ಬೆಳಗ್ಗೆ ಎಂಟು ಗಂಟೆಗೆ ಕಾಯಂಕುಳಂ ತಲುಪಲಿದ್ದು, ವಲ್ಲಿಕಾವ್ ಅಮೃತಾ ಇಂಜಿನಿಯರಿಂಗ್ ಶಾಲೆಯಲ್ಲಿ ನಡೆಯುವ ಸಂಘಚಾಲಕ್ ಶಿಬಿರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ವಲ್ಲಿಕಾವು ಆಶ್ರಮದಲ್ಲಿ ಮಾತಾ ಅಮೃತಾನಂದಮಯಿ ದೇವಿ ದರ್ಶನ ಪಡೆಯಲಿದ್ದಾರೆ.
9 ಮತ್ತು 10ರಂದು ತಿರುವನಂತಪುರಂನಲ್ಲಿ ನಡೆಯುವ ಸಂಘಟನಾ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದು, 10ರಂದು ಬೆಳಗ್ಗೆ 6.45ಕ್ಕೆ ಶ್ರೀಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ 7.45ಕ್ಕೆ ರಾಜಭವನದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಹಿಂತಿರುಗುತ್ತಾರೆ.





