ಸಮರಸ ಚಿತ್ರಸುದ್ದಿ: ಕುಂಬಳೆ: ಅನಂತಪುರ ಪರಿಸರದಲ್ಲಿ ದುರ್ಗಂಧ ಬೀರುತ್ತಿರು ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆದುರಾಗಿ ಅನಂತಪುರ ಉಳಿಸಿ ಅಭಿಯಾನದ ವತಿಯಿಂದ ಗಾಂಧಿ ಜಯಂತಿ ದಿನದಂದು ಪ್ರಾರಂಭಗೊಂಡು ನಿರಂತರವಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದ 13ನೇ ದಿನವಾದ ಶನಿವಾರ ಎಂಡೋಸಲ್ಫಾನ್ ಪ್ರತಿಭಟನೆಯ ಮುಂಚೂಣಿ ನಾಯಕ, ಮೊಟ್ಟಮೊದಲಾಗಿ ಎಂಡೋಸ್ವಲ್ಪಾನ್ ನಿಂದ ಜನರ ಆರೋಗ್ಯದ ಮೇಲಿರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದ ಡಾ. ಮೋಹನ್ ಕುಮಾರ್ ಪಡ್ರೆ ಅವರು ಸತ್ಯಾಗ್ರಹ ವೇದಿಕೆಗೆ ಭೇಟಿಕೊಟ್ಟು ಮಾರ್ಗದರ್ಶನ ನೀಡಿದರು.
……………………………………………………………………………………………………………
ಸಮರಸ ಚಿತ್ರಸುದ್ದಿ: ಕುಂಬಳೆ: ಹವ್ಯಕ ಪರಿಷತ್ ಕುಂಬಳೆ ವಲಯದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸೇವ್ ಅನಂತಪುರ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಸತ್ಯಾಗ್ರಹ ವೇದಿಕೆಗೆ ಸಂದರ್ಶಿಸಿದರು.

.jpg)
.jpg)
