ಬದಿಯಡ್ಕ : ಕಲೋತ್ಸವgಐu ಮಕ್ಕಳಲ್ಲಿ ಹುದುಗಿದ ಪ್ರತಿಭೆಯನ್ನು ಹೊರ ತರಲು ಸಹಾಯಕ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಸಭಾ ಕಂಪನ ದೂರ ಮಾಡಲು ಸಾಧ್ಯ ಎಂದು ಪೆರಡಾಲ ಸರ್ಕಾರಿ ಪ್ರೌಢಶಾಲೆಯ ಕಲೋತ್ಸವವನ್ನು ಉದ್ಘಾಟಿಸಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ ಹೇಳಿದರು.
ಸಂಘದ ಉಪಾಧ್ಯಕ್ಷ ರಾಮ ಅವರು ಮಾತನಾಡಿ, ಎರಡು ದಿನ ನಡೆಯುವ ಕಲೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು. ಮಾತೃ ರಕ್ಷಕ ಮಂಡಳಿಯ ಅಧ್ಯಕ್ಷ ತಾಹಿರಾ ಹನೀಫ್ ಅವರು ಕಲೋತ್ಸವದ ವೈಯುಕ್ತಿಕ ಚಾಂಪಿಯನ್ ಗಳಿಗೆ ಟ್ರೋಫಿಯನ್ನು ಘೋಷಿಸಿದರು. ಎಸ್.ಎಂ.ಸಿ. ಯ ಶರೀಫ್ ಮತ್ತು ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶಂಕರನಾರಾಯಣ ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಬೀನಾ ಶುಭಹಾರೈಸಿದರು. ಕಲೋತ್ಸವ ಸಮಿತಿಯ ಸಂಚಾಲಕಿ ಪ್ರಸೀತಾ ಕುಮಾರಿ ಸ್ವಾಗತಿಸಿ, ಕಾರ್ಯದರ್ಶಿ ರಿಷಾದ್ ಪಿ.ಎಂ.ಎ ವಂದಿಸಿದರು ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳಲ್ಲಿ ಮೂರು ವೇದಿಕೆಗಳಲ್ಲಿ ನೂರಾರು ಮಕ್ಕಳ ವಿವಿಧ ಪ್ರತಿಭಾ ಅನಾವರಣ ಸ್ಪರ್ಧೆಗಳು ಕುತೂಹಲ ಮೂಡಿಸಿತು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಹೈಸ್ಕೂಲ್ ವಿಭಾಗದಲ್ಲಿ ಫಾತಿಮಾ ಯು. ,ಯುಪಿ ವಿಭಾಗದಲ್ಲಿ ಅನ್ವಿತಾ, ಎಲ್.ಪಿ.ವಿಭಾಗದಲ್ಲಿ ಕೃಷ್ಣನಂದ ಇ..ಕೆ. ವೈಯುಕ್ತಿಕ ಚಾಂಪಿಯನ್ ಶಿಪ್ ಗಳಿಸಿದರು.

.jpg)
.jpg)
