ಉಪ್ಪಳ: ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್(ಟಿ.ಎಸ್.ಸಿ) ಕಾಸರಗೋಡು ಇದರ ನೇತೃತ್ವದಲ್ಲಿ ಪುರುಷರ ಹಾಗೂ ಮಹಿಳೆಯರ ಚೊಚ್ಚಲ ಬ್ಯಾಡ್ಮಿಂಟನ್ ಪಂದ್ಯಾಟ ಉಪ್ಪಳದಲ್ಲಿ ಜರಗಿತು.
ಜಿಲ್ಲಾ ಬ್ಯಾಟ್ಮಿಟನ್ ಅಸೋಸಿಯೇನ್ ಜೊತೆ ಕಾರ್ಯದರ್ಶಿ ಪ್ರಸಾದ್ ಉದ್ಘಾಟಿಸಿ ಮಾತನಾಡಿ, ಅಧ್ಯಾಪಕರು ಕೂಡ ಬ್ಯಾಡ್ಮಿಂಟನಿಗೆ ಆಸಕ್ತಿ ತೋರಿಸುವುದು ಉತ್ತಮ ಬೆಳವಣಿಗೆ. ಬ್ಯಾಡ್ಮಿಂಟನ್ ಕ್ರೀಡೆ ಮನುಷ್ಯನ ದೈಹಿಕ ಸಾಮಥ್ರ್ಯವನ್ನು ಉತ್ತಮಪಡಿಸಿ ಶರೀರಕ್ಕೆ ವ್ಯಾಯಾಮ ನೀಡುವ ಕ್ರೀಡೆಯಾಗಿದೆ. ಈ ಉತ್ಸಾಹ ನಿರಂತರವಾಗಿರಲಿ ಎಂದರು.
ಟಿ.ಎಸ್.ಸಿ ಅಧ್ಯಕ್ಷ ಸದಾಶಿವ ಮಾಸ್ತರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕ ದಾಮೋದರ್ ಮಾಸ್ತರ್ ಶುಭ ಹಾರೈಸಿದರು. ಹರಿನಾಥ ಮಾಸ್ತರ್, ಮ್ಯಾಚ್ ರೆಫ್ರಿ ಮನೋಜ್ ನೀರ್ಚಾಲ್ ಉಪಸ್ಥಿತರಿದ್ದರು. ಟಿ.ಎಸ್.ಸಿ. ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಡ್ಮಿಂಟನ್ ಪಂದ್ಯಾಟದ ಪ್ರಧಾನ ಸಂಚಾಲಕ ಮೆಲ್ವಿನ್ ಮಾಸ್ತರ್ ವಂದಿಸಿದರು.

.jpg)
.jpg)
