HEALTH TIPS

ಅಮೆರಿಕ: ಅಕ್ರಮ ಪ್ರವೇಶ; 1 ವರ್ಷದಲ್ಲಿ 97 ಸಾವಿರ ಭಾರತೀಯರ ಬಂಧನ

               ವಾಷಿಂಗ್ಟನ್: 2022ರ ಅಕ್ಟೋಬರ್‌ನಿಂದ 2023 ಸೆಪ್ಟೆಂಬರ್‌ ನಡುವೆ ಅಕ್ರಮವಾಗಿ ಗಡಿ ದಾಟುತ್ತಿದ್ದ 96,917 ಭಾರತೀಯರನ್ನು ಬಂಧಿಸಲಾಗಿದೆ ಎನ್ನುವ ಸಂಗತಿ ಅಮೆರಿಕದ ಸುಂಕ ಹಾಗೂ ಗಡಿ ಭದ್ರತಾ ದತ್ತಾಂಶದಿಂದ ಗೊತ್ತಾಗಿದೆ.

                 ಈ ಪೈಕಿ 30,010 ಮಂದಿಯನ್ನು ಕೆನಡಾದ ಗಡಿಯಲ್ಲಿ ಹಾಗೂ 41,770 ಮಂದಿಯನ್ನು ಮೆಕ್ಸಿಕೊದ ಗಡಿಯಲ್ಲಿ ಬಂಧಿಸಲಾಗಿದೆ.

               ಕಳೆದ ಕೆಲವು ವರ್ಷಗಳಲ್ಲಿ ಅಕ್ರಮವಾಗಿ ಗಡಿ ದಾಟುವಾಗ ಬಂಧನಕ್ಕೊಳಗಾದ ಭಾರತೀಯರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ ಎಂದ ವರದಿಯಲ್ಲಿ ಹೇಳಲಾಗಿದೆ.

             2019-20ರಲ್ಲಿ 19,883 ಭಾರತೀಯರು ಬಂಧಿತರಾಗಿದ್ದಾರೆ. 2020-21ರಲ್ಲಿ 30,662, 2021-22ರಲ್ಲಿ 63,927 ಭಾರತೀಯರ ಬಂಧನವಾಗಿದೆ.

                ಬಂಧಿತರನ್ನು ಜತೆಗಾರರು ಇರುವ ಅಪ್ರಾಪ್ತರು, ಕುಟುಂಬದ ಗುಂಪಿನಲ್ಲಿದ್ದ ವ್ಯಕ್ತಿ, ವಯಸ್ಕರು ಹಾಗೂ ಜತೆಗಾರರು ಇಲ್ಲದ ಮಕ್ಕಳು ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಈ ಪೈಕಿ ವಯಸ್ಕರ ಸಂಖ್ಯೆಯೇ ಅಧಿಕ. 2023ರ ಆರ್ಥಿಕ ವರ್ಷದಲ್ಲಿ 84,000 ವಯಸ್ಕರು ಅಕ್ರಮವಾಗಿ ಗಡಿ ಪ್ರವೇಶ ಮಾಡಿದ್ದಾರೆ. 730 ಜತೆಗಾರರಿಲ್ಲದ ಅಪ್ರಾಪ್ತರನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries