ಕಣ್ಣೂರು: ಶಾಲಾ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಕಣ್ಣೂರು ಪೋಲೀಸರು ಜಾರಿಗೆ ತಂದಿರುವ ವಾಚ್ ದಿ ಚಿಲ್ಡ್ರನ್ ಯೋಜನೆಯಲ್ಲಿ 107 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ವಿದ್ಯಾರ್ಥಿಗಳು ತರಗತಿ ವೇಳೆ ಬೀಚ್, ಮಾಲ್, ಕೋಟೆ, ಬಸ್ ನಿಲ್ದಾಣ, ಥಿಯೇಟರ್ ಗಳಲ್ಲಿ ಸಂಚರಿಸಿ ಅಮಲು ಪದಾರ್ಥಗಳನ್ನು ಬಳಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಪೋಲೀಸರು ಇಂಥದ್ದೊಂದು ಯೋಜನೆ ರೂಪಿಸಿದ್ದಾರೆ.
ಪಿಂಕ್ ಪೋಲೀಸರು ಪ್ರಮುಖವಾಗಿ ಕ್ಲಾಸ್ ಬಂಕ್ ಮಾಡಿ ತಿರುಗಾಡುತ್ತಿದ್ದ ವಿದ್ಯಾರ್ಥಿಗಳನ್ನು ಹಿಡಿಯುತ್ತಿದ್ದಾರೆ. ಅಂತಹ ದೂರುಗಳನ್ನು ನಿಭಾಯಿಸಲು, ಪ್ರತಿ ಠಾಣೆಯ ಶಾಲಾ ಮುಖ್ಯ ಶಿಕ್ಷಕರು, ಮಹಿಳಾ ಪೆÇಲೀಸ್ ಇನ್ಸ್‍ಪೆಕ್ಟರ್‍ಗಳು ಮತ್ತು ಮಹಿಳಾ ಪಿಂಕ್ ಪೋಲೀಸ್ ಎಸ್‍ಐಗಳು ಸದಸ್ಯರಾಗಿರುವ ವಾಟ್ಸಾಪ್ ಗ್ರೂಪ್ ಅನ್ನು ಸಹ ರಚಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಹುಡುಗರನ್ನು ಭೇಟಿಯಾಗಲು ತೆರಳುವ ಹಲವಾರು ಪ್ರಕರಣಗಳಿವೆ ಎಂದು ಪೋಲೀಸರು ಹೇಳುತ್ತಾರೆ. ಶಾಲಾ ಸಮವಸ್ತ್ರದಲ್ಲಿ ತಿರುಗಾಡಿದರೆ ಸಿಕ್ಕಿಬೀಳುವ ಭಯದಿಂದ ಮಕ್ಕಳು ಬಟ್ಟೆ ಬದಲಿಸುತ್ತಾರೆ. ಇದರಲ್ಲಿ ಐದನೇ ತರಗತಿಯ ಬಾಲಕಿ ಪ್ಲಸ್ ಟು ವಿದ್ಯಾರ್ಥಿಯೊಂದಿಗೆ ಥಿಯೇಟರ್ ನಲ್ಲಿ ಸಿಕ್ಕಿಬಿದ್ದಿದ್ದಾಳೆ. ಕೋಟಾದ ಇನ್ನೊಬ್ಬ ಹುಡುಗಿ. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಗೆಳೆಯನನ್ನು ಭೇಟಿಯಾಗಲು ಬಂದಾಗ ಸಿಕ್ಕಿಬಿದ್ದಿದ್ದಾಳೆ.
ಇಂತಹ ಘಟನೆಗಳಿಂದ ಅನುಮಾನಗೊಂಡ ಪೆÇಲೀಸರು ನೇರವಾಗಿ ವಿದ್ಯಾರ್ಥಿಗಳ ಬಳಿ ತೆರಳಿ ಮಾನಸಿಕ ಉದ್ವೇಗಕ್ಕೆ ಒಳಗಾಗದ ರೀತಿಯಲ್ಲಿ ಮಾತನಾಡುತ್ತಿರುವ ಲಕ್ಷಣದ ಮೇಲೆ ಬಳಿಕದ ಕ್ರಮ ಕೈಗೊಳ್ಳುತ್ತಾರೆ. ಬಳಿಕ ಪೋಷಕರೊಂದಿಗೆ ಅಗತ್ಯ ಸಲಹೆ ಸೂಚನೆ ನೀಡಿ ಮಕ್ಕಳನ್ನು ಕಳುಹಿಸಿಕೊಡಲಾಗುವುದು. ಕಣ್ಣೂರು ಎಸಿಪಿ ಟಿ.ಕೆ ರತ್ನಕುಮಾರ್ ನೇತೃತ್ವದಲ್ಲಿ ಅನುಷ್ಠಾನಗೊಂಡ ಯೋಜನೆ ಇದಾಗಿದೆ. ‘ಅಲೆದಾಡಬೇಡಿ, ತಿಳಿವಳಿಕೆ ನೀಡಿ’ ಎಂಬುದು ಯೋಜನೆಯ ಟ್ಯಾಗ್ ಲೈನ್.





