ಕೋಝಿಕ್ಕೋಡ್: ಮಾತಾ ಅಮೃತಾನಂದಮಯಿ ದೇವಿಯ 70 ನೇ ಹುಟ್ಟುಹಬ್ಬ ಮತ್ತು ಕೊಚ್ಚಿ ಅಮೃತಾ ಆಸ್ಪತ್ರೆಯ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕೋಝಿಕೋಡ್ ಮಲಬಾರ್ ಪ್ರದೇಶದ ಐದು ಜಿಲ್ಲೆಗಳಲ್ಲಿ ಹೃದಯ ದೋಷವುಳ್ಳ ಮಕ್ಕಳಿಗಾಗಿ ಉಚಿತ ಮೆಗಾ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದೆ.
ನ. 12ರಂದು ಕೋಝಿಕ್ಕೋಡ್, ಕಾಸರಗೋಡು, ಕಣ್ಣೂರು, ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳ ಮಕ್ಕಳಿಗೆ ವೈದ್ಯಕೀಯ ಶಿಬಿರವನ್ನು ಕೋಝಿಕ್ಕೋಡ್‍ನ ವೆಲ್ಲಿಮಾಟ್ಕುನ್ ಮಾತಾ ಅಮೃತಾನಂದಮಯಿ ಮಠದ ಪಕ್ಕದಲ್ಲಿರುವ ಅಮೃತಕೃಪಾ ಸ್ಪೆμÁಲಿಟಿ ಕ್ಲಿನಿಕ್‍ನಲ್ಲಿ ನಡೆಸಲಾಗುವುದು. ಶಿಬಿರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ. ಶ್ರೀಜಯನ್ ಉದ್ಘಾಟಿಸುವರು. ಶಿಬಿರವು ಬೆಳಿಗ್ಗೆ 8:30 ರಿಂದ ಸಂಜೆ 4:ರವರೆಗೆ ನಡೆಯಲಿದ್ದು, ಡಾ. ಪಿ.ಕೆ. ಬ್ರಿಜೇಶ್, ಡಾ. ಬಾಲು ವೈದ್ಯನಾಥನ್ ನೇತೃತ್ವ ವಹಿಸಲಿದ್ದಾರೆ.
12ರಂದು ಬೆಳಗ್ಗೆ 8.30ಕ್ಕೆ ಅಮೃತ ಕೃಪಾ ಸ್ಪೆμÁಲಿಟಿ ಕ್ಲಿನಿಕ್ ಉದ್ಘಾಟನೆಯನ್ನು ಕೊಚ್ಚಿ ಅಮೃತ ಸ್ಕೂಲ್ ಆಫ್ ಮೆಡಿಸಿನ್ ನ ಪ್ರಾಂಶುಪಾಲ ಡಾ. ಕೆಪಿ ಗಿರೀಶ್ ಕುಮಾರ್ ನಿರ್ವಹಿಸುವರು. ಶಿಬಿರಕ್ಕೆ ಬರುವ ಮಕ್ಕಳಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಕೊಚ್ಚಿ ಅಮೃತ ಆಸ್ಪತ್ರೆಯಲ್ಲಿ ಉಚಿತವಾಗಿ ಆಪರೇಷನ್ ಮಾಡಲಾಗುವುದು ಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿಬಿರದಲ್ಲಿ ಭಾಗವಹಿಸಲು 9744894949 ಮತ್ತು 8921508515ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ವಾಮಿ ವಿವೇಕಾಮೃತಾನಂದಪುರಿ, ಕೋಝಿಕ್ಕೋಡ್ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರು, ಅಮೃತಾ ಆಸ್ಪತ್ರೆ ಮಕ್ಕಳ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಕೆ. ಬ್ರಿಜೇಶ್, ಜನರಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ. ಸಿ. ಶ್ರೀಕುಮಾರ್ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




.jpeg)
