ಬದಿಯಡ್ಕ: ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸ|ಭೆ ನವಂಬರ್ 17 ಶುಕ್ರವಾರ ಬದಿಯಡ್ಕ ಶಾಖೆಯಲ್ಲಿ ಜರಗಲಿರುವುದು. ಬೆಳಗ್ಗೆ 10.30ರಿಂದ ನೋಂದಣೆ, 11 ಕ್ಕೆ ಸ್ವಾಗತ, 11.30ಚರ್ಚೆ, 12 ಗಂಟೆಗೆ ಅಧ್ಯಕ್ಷರ ಮಾತು, ಮಧ್ಯಾಹ್ನ ಭೋಜನದೊಂದಿಗೆ ಸಮಾಪ್ತಿಯಾಗಲಿದೆ. ಮಾನ್ಯ ಸದಸ್ಯ ಬೆಳೆಗಾರರಿಂದ ಉದ್ಘಾಟನೆ, ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್ ಹಾಗೂ ಕ್ಯಾಂಪ್ಕೋ ಆಡಳಿತ ಮಂಡಳಿಯವರು ಉಪಸ್ಥಿತರಿರುವರು.

