ಮುಳ್ಳೇರಿಯ: ಕೋಟೂರು ಕೆಎಎಲ್‍ಪಿ ಶಾಲಾ ಪ್ಲಾಟಿನಂ ಮಹೋತ್ಸವ, ಹಿರಿಯ ವಿದ್ಯಾರ್ಥಿಗಳ ಸಂಗಮ ನ. 5ರಂದು ಸಂಜೆ 4ಕ್ಕೆ ಶಾಲಾ ವಠಾರದಲ್ಲಿ ಜರುಗಲಿದೆ. 1948 ರಲ್ಲಿ ಆರಂಭಗೊಂಡ ಶಾಲೆಗೆ 1948ರಲ್ಲಿ ಅಂಗೀಕಾರ ಲಭಿಸಿದ್ದು, 1 ರಿಂದ 5 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ತರಗತಿಯನ್ನು ಇಲ್ಲಿ ಮೊದಲು ಆರಂಭಿಸಲಾಗಿದೆ ಎಂದು ಪ್ಲಾಟಿನಂ ಮಹೋತ್ಸವ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉದುಮ ಶಾಸಕ ಸಿ.ಎಚ್.ಕುಂಜಂಬು ಅವರು ಆ. 19ರಂದು ಪ್ಲಾಟಿನಂ ಜುಬಿಲಿ ಆಚರಣೆಯ ವರ್ಷಪೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಸೆಪ್ಟೆಂಬರ್‍ನಲ್ಲಿ ವೈದ್ಯಕೀಯ ಶಿಬಿರ, ಅಕ್ಟೋಬರ್ ತಿಂಗಳಲ್ಲಿ ಹಳೆ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಕ್ರೀಡಾ ಸ್ಪರ್ಧೆಗಳು, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ನವೆಂಬರ್ 5 ರಂದು ಬೆಳಿಗ್ಗೆ ಕ್ವಜ್,
ಸಂಜೆ 4ಕ್ಕೆ ಹಳೆ ವಿದ್ಯಾರ್ಥಿಗಳ ಸಮಾವೇಶ ಹಾಗೂ ಶೈಕ್ಷಣಿಕ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಕಳೆದ 75 ವರ್ಷಗಳಿಂದ ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿಗಳ ಮಹಾಸಂಗಮದಲ್ಲಿಪಾಲ್ಗೊಳ್ಳುವಂತೆ ಮಾಡಲು ಪ್ಲಾಟಿನಂ ಜುಬಿಲಿ ಆಚರಣಾ ಸಮಿತಿಯು ತೀರ್ಮಾನಿಸಿದೆ. ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಸಂಸದ ರಾಜಮೋಹನ್ ಉಣ್ಣಿತ್ತಾನ್, ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಣ್ಣೂರು ವಿಶ್ವವಿದ್ಯಾನಿಲಯದ ಶಿಕ್ಷಣ ನಿಯಂತ್ರಕ ಪ್ರಾಧ್ಯಾಪಕ ಕೆ.ಪಿ.ಜಯರಾಜನ್ ಶೈಕ್ಷಣಿಕ ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ಲಟಿನಂ ಉತ್ಸವ ಸಮಿತಿ ಅಧ್ಯಕ್ಷ ಪಿ.ಬಾಲಕೃಷ್ಣನ್, ಪ್ರಧಾನ ಸಂಚಾಲಕ ಹಾಗೂ ಮುಖ್ಯ ಶಿಕ್ಷಕಿ ಕೆ.ಎಂ.ಸುಕುಮಾರಿ, ಶಿಕ್ಷಕಿ ಕೋಶಾಧಿಕಾರಿ ಪಿ.ಕುಞÂಕಣ್ಣನ್ ನಾಯರ್ ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷ ನಾರಾಯಣನ್ ಮಾಸ್ಟರ್ ಕಾವುಂಗಲ್, ಶಾಲಾ ಪಿ.ಟಿ.ಎ ಅಧ್ಯಕ್ಷ ಹಾಗೂ ಆಚರಣಾ ಸಮಿತಿ ಸಂಚಾಲಕ ಶಿವಶಂಕರನ್ ಕೆ.ಎಸ್. ಸಂಸ್ಥೆಯ ಸಂಚಾಲಕ ಕೆ.ಗೋಪಾಲನ್ ಮತ್ತು ಅಧ್ಯಕ್ಷ ಸಿ.ಅಚ್ಯುತನ್ ಉಪಸ್ಥಿತರಿದ್ದರು.

