ಕಾಸರಗೋಡು: ವಿದ್ಯಾನಗರ ಚಿನ್ಮಯ ಕಾಲೋನಿ ನಿವಾಸಿಗಳ ಸಂಘ, ಕಾಸರಗೋಡು ಪೀಪಲ್ಸ್ ಫೆÇೀರಂ ಹಾಗೂ ಕೃಷ್ಣಾ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ ಕಾಯಿಲೆಯ ಉಚಿತ ತಪಾಸಣಾ ವೈದ್ಯಕೀಯ ಶಿಬಿರ ನ.11ರಂದು ವಿದ್ಯಾನಗರದಲ್ಲಿ ಜರುಗಲಿರುವುದು.
ಕ್ಯಾನ್ಸರ್ ತಪಾಸಣಾ ಉಚಿತ ವೈದ್ಯಕೀಯ ಶಿಬಿರಕ್ಕೆ ನೋಂದಾವಣೆ ಆರಂಭಗೊಂಡಿದ್ದು, ಸ್ತನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್ ರೋಗಲಕ್ಷಣಗಳ ಆರಂಭಿಕ ಪತ್ತೆ, ಮತ್ತು ಇವುಗಳಿಗೆ ಚಿಕಿತ್ಸೆ ನೀಡುವುದು ಶಿಬಿರದ ಉದ್ದೇಶವಾಗಿದೆ. ಶಿಬಿರವು ನವೆಂಬರ್ 11 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಡೆಯಲಿದೆ. 5 ಜನ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದು, ಗರಿಷ್ಠ ನೂರು ಜನರನ್ನು ಪರೀಕ್ಷಿಸಲಾಗುತ್ತಿದೆ. ಪೂರ್ವ ನೋಂದಾವಣೆಗಾಗಿ ಮೊಬೈಲ್ ಸಂಖ್ಯೆ(9446281854, 88916 38244, 94474 39434)ಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

