ಕುಂಬಳೆ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಮೇರಿ ಮೆಟ್ಟಿ ಮೇರಿ ದೇಶ್ ಅಭಿಯಾನದ ಅಂಗವಾಗಿ ಯುವಮೋರ್ಚ ಕುಂಬಳೆ ಮಂಡಲ ಸಮಿತಿಯಿಂದ ಸಮರ್ಪಣೆ ನಡೆಯಿತು.
ಯುವ ಮೋರ್ಚ ಕುಂಬಳೆ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್, ಪ್ರಧಾನ ಕಾರ್ಯದರ್ಶಿ ದೀಕ್ಷಿತ ಐಲ, ಕುಂಬಳೆ ಪಂಚಾಯಣi ಸದಸ್ಯರಾದ ಅಜಯ್ ನಾಯ್ಕಾಪು ಹಾಗೂ ಮೋಹನ ಬಾಂಬ್ರಣ ಮತ್ತು ಪುಷ್ಪರಾಜ್ ಬಾಡೂರು, ಕುಂಬಳೆ ಪ್ರದೇಶದ ಎರಡು ಪ್ರಸಿದ್ಧ ದೇವಸ್ಥಾನಗಳಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಹಾಗೂ ಮುಜಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನಗಳ ಪವಿತ್ರ ಮಣ್ಣುಗಳನ್ನು ಶೇಖರಿಸಿ ಅಭಿಯಾನದ ಭಾಗವಾಗಿ ದೆಹಲಿಗೆ ತೆರಳಿ ಮಣ್ಣುನ್ನು ಸಮರ್ಪಿಸಲಾಯಿತು.

.jpg)
