ಕಾಸರಗೋಡು, ನ.20: ತಾಳಿಪಡ್ಪಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್‍ನಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 98 ನೇ ಹುಟ್ಟು ಹಬ್ಬ ನ.23 ರಂದು ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 5.30 ಕ್ಕೆ ಓಂಕಾರ ಸುಪ್ರಭಾತ, ನಗರ ಸಂಕೀರ್ತನೆ, 7 ಕ್ಕೆ ಧ್ವಜಾರೋಹಣ, 8 ಕ್ಕೆ ಗಣಪತಿ ಹವನ, 9 ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ, 10.30 ಕ್ಕೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ಕ್ಕೆ ಮಂಗಳಾರತಿ, 1.30 ಕ್ಕೆ ನಾರಾಯಣ ಸೇವೆ, ಸಂಜೆ 5 ಕ್ಕೆ ಸಾಯಿ ಸಹಸ್ರ ನಾಮಾರ್ಚನೆ, ಭಜನೆ, 7.30 ಕ್ಕೆ ಹುಟ್ಟು ಹಬ್ಬದ ದೀಪ ಬೆಳಗಿಸುವುದು. ಸಿಡಿಮದ್ದು, ಉಯ್ಯಾಲೋತ್ಸವ,ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.