ಮಂಜೇಶ್ವರ : ಮಕ್ಕಳ ದಿನಾಚರಣೆಯ ಭಾಗವಾಗಿ ಮಂಜೇಶ್ವರ ಗ್ರಾಮ ಪಂಚಾಯತಿ ವತಿಯಿಂದ ಮಂಜೇಶ್ವರ ಜಿ.ಡಬ್ಲ್ಯು.ಎಲ್.ಪಿ.ಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಹರಿತ ಸಭೆ ಹಮ್ಮಿ ಕೊಳ್ಳಲಾಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಶಾಲೆಗಳ ಬಹುತೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಳಿಕ ನಡೆದ ಶಾಲೆಗಳ ತ್ಯಾಜ್ಯ ನಿರ್ವಹಣಾ ಚಟುವಟಿಕಗಳ ವರದಿ ಮಂಡನೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ ಶಾಲೆಗಳ ಪೈಕಿ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲಾ ವಿದ್ಯಾರ್ಥಿಗಳು ಮಂಡಿಸಿದ ವರದಿ ಪ್ರಥಮ ಸ್ಥಾನವನ್ನು ಪಡೆದಿದೆ.
ವಿಜೇತ ವಿದ್ಯಾರ್ಥಿಗಳಾದ ನಫೀಸತ್ ಹನ, ಶಹೀಮಾ, ಫಾತಿಮಾ ಅಸ್ಸ, ಅಮ್ನಾ ಫಾತಿಮಾ, ಫಾತಿಮ ಮರ್ವಾ, ಝಾಹಿದ್ ನಝೀರ್, ಮಹಮ್ಮದ್ ಆದಂ ಇನಾಸ್, ಫಾರಿಸ್, ಮೊಹಮ್ಮದ್ ಫಾಯಿಸ್ ಹಾಗೂ ಇಬ್ರಾಹಿಂ ಶಹಿಂ ರವರಿಗೆ ವೇದಿಕೆಯಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭ ವಾರ್ಡ್ ಸದಸ್ಯರುಗಳಾದ ಯಾದವ್ ಬಡಾಜೆ, ವಿನಯ ಬಾಸ್ಕರ್, ರಾಜೇಶ್, ರೇಖಾ, ಪಂಚಾಯತು ಕಾರ್ಯದರ್ಶಿ ಸುಧೀರ್ ಎ, ಸಿಬ್ಬಂದಿ ಭಾವನಾ, ಅಧ್ಯಾಪಿಕೆ ಮೈಮೂನಾ ಮೊದಲಾದವರು ಉಪಸ್ಥಿತರಿದ್ದರು.