ಮುಳ್ಳೇರಿಯ: ಸುವರ್ಣ ಮಹೋತ್ಸವ ಸಂಭ್ರಮಾಚರಣೆ ನಿಮಿತ್ತ ಕೋಟೂರು ಕಾರ್ತಿಕೇಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ ಮತ್ತು ನಿವೃತ್ತ ಹಿರಿಯ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಮುಖ್ಯ ಅತಿಥಿಯಾಗಿದ್ದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷೆ ಪಿ.ಬಾಲಕೃಷ್ಣನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರ್ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಇ.ಮೋಹನನ್, ಸದಸ್ಯರಾದ ಎ.ಶ್ಯಾಮಲ, ಅನನ್ಯಾ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ.ಗೋಪಾಲನ್ ಮಣಿಯಾಣಿ, ಕಾರ್ಯದರ್ಶಿ ಕೇಳು ಮಾಸ್ತರ್, ಮುಖ್ಯೋಪಾಧ್ಯಾಯಿನಿ ಸುಕುಮಾರಿ ಕೆ.ಎಂ, ಪಿ.ಟಿ.ಎ ಅಧ್ಯಕ್ಷ ಶಿವಶಂಕರನ್ ಕೆ.ಎಸ್, ಪಿ.ಟಿ.ಎ ಮಾತೃ ಮಂಡಳಿ ಅಧ್ಯಕ್ಷೆ ಆಶಾ ಕುಮಾರಿ.ಪಿ,. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಅಚ್ಯುತನ್ ಮಾತನಾಡಿದರು. . ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ ಹಾಗೂ ಕಲಾ ಮಂಡಲಂ ನಯನ ಹಾಗೂ ತಂಡದವರಿಂದ ಓಟ್ಟಂ ತುಳ್ಳಲ್ ಪ್ರದರ್ಶನಗೊಂಡಿತು. ಹಳೆವಿದ್ಯಾರ್ಥಿ ಸಂಘದ ಸಂಚಾಲಕ ಕೆ.ಗೋಪಾಲನ್ ಸ್ವಾಗತಿಸಿ, ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಬೆಳ್ಳಿಪ್ಪಾಡಿ ವಂದಿಸಿದರು.




