HEALTH TIPS

ಅಂಬಿತ್ತಡಿ ಅಂಗನವಾಡಿ ಸ್ಥಳಾಂತರಿಸಲು ಅವಕಾಶ ನೀಡೆವು: ಎ.ಎಲ್.ಎಂ.ಎಸ್. ಸಮಿತಿ

           ಕುಂಬಳೆ: ಮಂಜೇಶ್ವರ ಪಂಚಾಯತಿ ಅಂಬಿತ್ತಡಿಯಲ್ಲಿ ಕಳೆದ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸೆಂಟರ್ ನಂ.11 ಅಂಗನವಾಡಿಯನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಅಂಗನವಾಡಿ ಅಭಿವೃದ್ದಿ ಸಮಿತಿ(ಎಎಲ್‍ಎಂಎಸ್ )ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

                ಮಾದರಿ ಅಂಗನವಾಡಿಯಾಗಿ ಗುರುತಿಸಿಕೊಂಡ ಬಳಿಕ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಸ್ವಂತ ಕಟ್ಟಡ ನಿರ್ಮಿಸಲು 23 ಲಕ್ಷ ರೂ.ಮಂಜೂರಾಗಿದೆ.  ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಆದರೆ ಈ ಭಾಗದಲ್ಲಿ ಕಟ್ಟಡ ನಿರ್ಮಿಸಲು ಸ್ವಂತ ಜಮೀನು ಇಲ್ಲದ ಕಾರಣ 6ನೇ ವಾರ್ಡಿನ ಪ್ರತ್ಯೇಕ ಜಾಗದಲ್ಲಿ ಮಾಜಿ ವಾರ್ಡ್ ಸದಸ್ಯೆ ಗೌಪ್ಯವಾಗಿ ನಾಲ್ಕು ಸೆಂಟ್ಸ್ ಜಾಗ ಖರೀದಿಸಿ ಅಂಗನವಾಡಿ ಸ್ಥಳಾಂತರಕ್ಕೆ ಪ್ರಯತ್ನ ಆರಂಭಿಸಿದ್ದು ಇದು ಸ್ಥಳೀಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

          ಬಳಿಕ ಬಂದ ವಾರ್ಡ್‍ನ ಸದಸ್ಯರು ಈ ವಿಚಾರದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಿ ನೂತನ ಕಟ್ಟಡ ಆರಂಭಿಸುವ ಪ್ರಯತ್ನಕ್ಕೆ ಮುಂದಾದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯಿತಿ ಗಮನ ಸೆಳೆದ ಹಿನ್ನೆಲೆಯಲ್ಲಿ  ಶಿಶು ಅಭಿವೃದ್ಧಿ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುರುತಿಸಿದ ಸ್ಥಳ ಅಯೋಗ್ಯವಾಗಿದೆ ಎಂದು ವರದಿ ನೀಡಿತ್ತು. ಬಳಿಕ ಎಎಲ್.ಎಂ.ಎಸ್. ಸಮಿತಿ ಹಾಗೂ ಸ್ಥಳೀಯರು ಬೇರೊಂದು ಸ್ಥಳವನ್ನು ಹುಡುಕಿದರೂ ಪಕ್ಕದಲ್ಲಿಯೇ ಕಂಪನಿಯೊಂದು ಕಾರ್ಯಾಚರಿಸುತ್ತಿದೆ ಎಂಬ ಕಾರಣಕ್ಕೆ ನಿರಾಕರಿಸಲಾಯಿತು. ಇದರ ಬೆನ್ನಲ್ಲೇ 7ನೇ ವಾರ್ಡ್ ನಲ್ಲಿ ಜಮೀನು ಖರೀದಿಸಲು ಪಂಚಾಯಿತಿ ಸ್ವಂತ ನಿಧಿಯಿಂದ ಹಣ ಮಂಜೂರು ಮಾಡಿದೆ. ಅಂಬಿತ್ತಡಿ ಅಂಗನವಾಡಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು ಪಂಚಾಯಿತಿ ಕಾರ್ಯದರ್ಶಿ ವಿರುದ್ಧ ಸಲ್ಲಿಸಿರುವ ದೂರು ಒಂಬುಡ್ಸ್‍ಮನ್‍ನಲ್ಲಿ ಇತ್ಯರ್ಥವಾಗದೇ ಇರುವುದರಿಂದ ಕಾನೂನು ತೊಡಕು ಎದುರಾಗಿದೆ.

             ಕಾಲು ಶತಮಾನದಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಬದಲಾವಣೆಯ ಹಿಂದೆ ಕೆಲವು ರಾಜಕೀಯ ಆಸಕ್ತಿ ಮಾತ್ರ. ಅಡಗಿದೆ. ಸ್ಥಳೀಯರ ವಿರೋಧ ಬಲವಾಗಿರುವುದನ್ನು ಅರಿತ ಕೆಲವರು ಇದೀಗ ಧರಣಿಗೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿ, ಗ್ರಾಮಾಧಿಕಾರಿ, ಬ್ಲಾಕ್, ಗ್ರಾಮ ಪಂಚಾಯಿತಿ ಅಥವಾ ಎಲ್‍ಎಂಎಸ್ ಸಮಿತಿ ಬೇರೆ ಪ್ರದೇಶಕ್ಕೆ ವರ್ಗಾವಣೆ ಮಾಡಲು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬ್ಲಾಕ್‍ನ ಸದಸ್ಯರು ಅಪಪ್ರಚಾರ ಹಾಗೂ ದೂರು ದಾಖಲಿಸುವ ಮೂಲಕ ಸ್ಥಳೀಯರಿಗೆ ಸವಾಲು ಹಾಕುತ್ತಿದ್ದಾರೆ. ಅದರ ಪೂರ್ವಾಗ್ರಹವನ್ನು ಹೊರತರಬೇಕು. ಸಮೀಕ್ಷಾ ವರದಿಗಳ ಪ್ರಕಾರ 7ನೇ ವಾರ್ಡ್ ನಲ್ಲಿ ಅಂಗನವಾಡಿಗೆ ಜನಸಂಖ್ಯೆಗೆ ಅನುಗುಣವಾಗಿ ಹೊಸ ಕಟ್ಟಡ ನಿರ್ಮಿಸಬೇಕು. ನೈಜ ಸಂಗತಿಗಳನ್ನು ಮರೆಮಾಚುವ ಹೇಯ ನಡೆಗಳನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎ.ಎಲ್.ಎಂ.ಎಸ್. ಸಮಿತಿ ಪದಾಧಿಕಾರಿಗಳು ಹೇಳಿರುವರು. 

            ಸುದ್ದಿಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯೆ ಹಾಗೂ ಎ.ಎಲ್. ಎಂ.ಎಸ್. ಅಧ್ಯಕ್ಷೆ ಆಯೆಷತ್ ರುಬೀನಾ, ಉಪಾಧ್ಯಕ್ಷ ಅಚ್ಚುಕುಂಞÂ್ಞ, ಸದಸ್ಯರಾದ ಗಾಯತ್ರಿ, ಸವಿತಾ, ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries