ನವದೆಹಲಿ:ವಿದ್ಯುನ್ಮಾನ ಮತ್ತು ಮಾಹಿತಿ (IT) ಸಚಿವಾಲಯವು ನ.23ರಂದು 'ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಡೀಪ್ ಫೇಕ್ ವಿಷಯದ ಪಿಡುಗುಗಳು 'ಕುರಿತು ಸಭೆಗೆ ಹಾಜರಾಗುವಂತೆ ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳ ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.
0
samarasasudhi
ನವೆಂಬರ್ 23, 2023
ನವದೆಹಲಿ:ವಿದ್ಯುನ್ಮಾನ ಮತ್ತು ಮಾಹಿತಿ (IT) ಸಚಿವಾಲಯವು ನ.23ರಂದು 'ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಡೀಪ್ ಫೇಕ್ ವಿಷಯದ ಪಿಡುಗುಗಳು 'ಕುರಿತು ಸಭೆಗೆ ಹಾಜರಾಗುವಂತೆ ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳ ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.
ಡೀಪ್ ಫೇಕ್ ಗಳ ಕುರಿತು ಚರ್ಚಿಸಲು ಸಚಿವಾಲಯವು ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಕರೆಸಲಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಎರಡು ದಿನಗಳ ಹಿಂದೆ ತಿಳಿಸಿದ್ದರು.
ಡೀಪ್ ಫೇಕ್ ಗಳನ್ನು ಸೃಷ್ಟಿಸಲು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಈ ಬಗ್ಗೆ ಜಾಗ್ರತಿಯನ್ನು ಮೂಡಿಸುವಲ್ಲಿ ಮಾಧ್ಯಮಗಳು ಪಾತ್ರವನ್ನು ವಹಿಸಬಹುದಾಗಿದೆ ಎಂದು ಹೇಳಿದ್ದರು.