ನವದೆಹಲಿ: ಬಿಜೆಪಿಯ ಚುನಾವಣಾ ಪ್ರಚಾರದ ಕುರಿತು ಅನುಭವ ಮತ್ತು ಒಳನೋಟ ಪಡೆಯುವ ಉದ್ದೇಶದಿಂದ ವಿದೇಶಿ ರಾಜತಾಂತ್ರಿಕರ ತ್ರಿಸದಸ್ಯ ನಿಯೋಗವೊಂದು ನವೆಂಬರ್ 14ರಿಂದ 15ರವರೆಗೆ ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಲಿದೆ ಎಂದು ಪಕ್ಷ ತಿಳಿಸಿದೆ.
0
samarasasudhi
ನವೆಂಬರ್ 14, 2023
ನವದೆಹಲಿ: ಬಿಜೆಪಿಯ ಚುನಾವಣಾ ಪ್ರಚಾರದ ಕುರಿತು ಅನುಭವ ಮತ್ತು ಒಳನೋಟ ಪಡೆಯುವ ಉದ್ದೇಶದಿಂದ ವಿದೇಶಿ ರಾಜತಾಂತ್ರಿಕರ ತ್ರಿಸದಸ್ಯ ನಿಯೋಗವೊಂದು ನವೆಂಬರ್ 14ರಿಂದ 15ರವರೆಗೆ ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಲಿದೆ ಎಂದು ಪಕ್ಷ ತಿಳಿಸಿದೆ.
ಭಾರತದ ಆಸ್ಟ್ರೇಲಿಯಾ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಮಕೆಲ್ ರೀಸ್, ತಾಂಜಾನಿಯಾ ರಾಯಭಾರಿ ಕಚೇರಿಯ ಅಧಿಕಾರಿ ಬಾಝಿಲ್ ಎಂ. ಲ್ಯಾಕಿನಾನ, ಜಪಾನ್ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಮಾಯುಮಿ ಸುಬಾಕಿಮೊಟೊ ಅವರು ಈ ನಿಯೋಗದಲ್ಲಿದ್ದಾರೆ.
ಬಿಜೆಪಿಯ 43ನೇ ಸಂಸ್ಥಾಪನಾ ದಿವಸದಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 'ನೊ ಬಿಜೆಪಿ' (ಬಿಜೆಪಿಯನ್ನು ಅರಿಯಿರಿ) ಎಂಬ ಉಪಕ್ರಮಕ್ಕೆ ಚಾಲನೆ ನೀಡಿದ್ದರು. ಅದರ ಭಾಗವಾಗಿ ವಿದೇಶಿ ನಿಯೋಗವು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದೆ.
2022ರಲ್ಲಿ ನಡೆದಿದ್ದ ಹಿಮಾಚಲ ಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ನೇಪಾಳ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಡೆನ್ಮಾರ್ಕ್ ಮತ್ತು ಸಿಂಗಪುರದ ರಾಜತಾಂತ್ರಿಕರ ನಿಯೋಗ ಚುನಾವಣಾ ಪ್ರಚಾರವನ್ನು ವೀಕ್ಷಿಸಿತ್ತು.