ಬದಿಯಡ್ಕ: ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದಲ್ಲಿ ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಸ್ಮರಣಾರ್ಥ ಶ್ರೀ ಹನುಮಗಿರಿ ಮೇಳದವರಿಂದ ಸೇವಾರ್ಥ ಬಯಲಾಟ ನ. 21ರಂದು ಸಂಜೆ 5ರಿಂದ ಶ್ರೀ ಎಡನೀರು ಮಠದ ವಠಾರದಲ್ಲಿ ಜರುಗಲಿದೆ. 'ಇಂದ್ರ ಪ್ರಸ್ಥ'ಎಂಬ ಬಯಲಾಟ ಪ್ರದರ್ಶನಗೊಳ್ಳಲಿದೆ.
ಸಂಜೆ 7ಕ್ಕೆ ನಡೆಯುವ ಅಭಿನಂದನಾ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಯಕ್ಷಗಾನದ ಹಿರಿಯ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯ, ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ ಶೆಣೈ, ಅಷ್ಟಾವಧಾನಿ, ಬಹುಶ್ರುತ ವಿದ್ವಾಂಸ ಕಬ್ಬಿನಾಲೆ ವಸಂತ ಭಾರಧ್ವಾಜ್ ಅವರನ್ನು ಸನ್ಮಾನಿಸಲಾಗುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ವಾಸುದೇವ ರಂಗಾಭಟ್ ಮಧೂರು ಅಭಿನಂದನಾ ಭಾಷಣ ಮಾಡುವರು.


