ಕಾಸರಗೋಡು: ಸ್ವ ಉದ್ಯೋಗ ಮತ್ತು ಸೇವಾ ಉದ್ದೇಶದೊಂದಿಗೆ ಕಾಞಂಗಾಡು ನಗರಸಭಾ ಕುಟುಂಬಶ್ರೀ ಸದಸ್ಯರಿಗೆ ಮೊಟ್ಟೆ ಕೋಳಿಗಳ ಉಇತ ವಿತರಣಾ ಸಮಾರಂಭ ನಗರಸಭಾ ಕಚೇರಿ ವಠಾರದಲ್ಲಿ ಜರುಗಿತು. ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಐದು ಮಂದಿಯಿರುವ ಗುಂಪಿಗೆ 50 ಕೋಳಿಗಳನ್ನು ನೀಡಲಾಯಿತು. ಈ ರೀತಿ ಉಚಿತವಾಗಿ ವಿತರಿಸುವ ಕೋಳಿಗಳಿಂದ ಲಭಿಸುವ ಮೊಟ್ಟೆಗಳಲ್ಲಿ 20 ಮೊಟ್ಟೆಗಳನ್ನು ಸನಿಹದ ಅಂಗನವಾಡಿಗಳಿಗೆ ಉಚಿತವಾಗಿ ನೀಡಲಾಗುವುದು. ಉದ್ಯಮಶೀಲತಾ ನಿಧಿಯನ್ನು ಬಳಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕಾಞಂಗಾಡು ನಗರಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಕೋಳಿಗಳನ್ನು ಫಲಾನುಭವಿಗಳಿಗೆ ವಿತರಿಸುವ ಮೂಲಕ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ.ಅಹ್ಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಕೆ.ಅನೀಸನ್, ಜಿಲ್ಲಾ ಮಿಷನ್ ಎಫ್‍ಎಲ್‍ಸಿಎ ವಿ.ರಜನಿ, ಸಿಡಿಎಸ್ ಅಧ್ಯಕ್ಷರಾದ ಕೆ.ಸುಜಿನಿ, ಸೂರ್ಯ ಜಾನಕಿ, ಉಪಾಧ್ಯಕ್ಷೆ ಕೆ.ವಿ.ಉಷಾ, ಲೆಕ್ಕಾಧಿಕಾರಿಗಳಾದ ಪಿ.ರತಿಕಾ, ಪಿ.ಸುಧಾ ಮಾತನಾಡಿದರು.ಉಪಸ್ಥಿತರಿದ್ದರು.





