ಕಾಸರಗೋಡು: ಕೇರಳ ವರ್ಮಾ ಕಾಲೇಜಿನಲ್ಲಿ ವಿದ್ಯಾರ್ಥಿ ಯೂನಿಯನ್ ಚುನಾವಣೆ ಬುಡಮೇಲುಗೊಳಿಸಲು ಸಂಚು ರೂಪಿಸಿದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರ ನಿವಾಸಕ್ಕೆ ಮೆರವಣಿಗೆ ನಡೆಸಿದ ಕೆಎಸ್ ಒಯು ಕಾರ್ಯಕರ್ತರನ್ನು ಅಮಾನುಷವಾಗಿ ಥಳಿಸಿ ಗಾಯಗೊಳಿಸಿದ ಪೆÇಲೀಸ್ ದೌರ್ಜನ್ಯವನ್ನು ಖಂಡಿಸಿ ಕೆಎಸ್‍ಯು ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿದರು. ಕೆಎಸ್‍ಯು ಜಿಲ್ಲಾಧ್ಯಕ್ಷ ವಕೀಲ ಜವಾದ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪ್ರಭಾಕರನ್, ಕೆಎಸ್‍ಯು ರಾಜ್ಯ ಸಮಿತಿ ಸದಸ್ಯೆ ಸೇರಾ ಮರಿಯಮ್‍ಬೆನ್ನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಷ್ಣು ಕಾಡಗಂ, ರಾಹುಲ್, ವಿಷ್ಣು ಬಂದಡ್ಕ, ಶ್ರುತಿ, ಮಣಿಕಂಠನ್, ಅಭಿನವ್, ಅನುರಾಗ್, ವಿಷ್ಣು, ದೇವಿನ್ ಚಾಕೋ, ಕ್ರಿಸ್ಟೋ ಅನಿಲ್ ಕೋಸಿ ಮೊದಲಾದವರು ನೇತೃತ್ವ ನೀಡಿದರು. ಕೀರ್ತನಾ ಪೆÇತಾವೂರು ವಂದಿಸಿದರು. ಪೊಲೀಸ್ ದೌರ್ಜನ್ಯ ಖಂಡಿಸಿ ಕೆಎಸ್‍ಯು ರಾಜ್ಯ ಸಮಿತಿ ವತಿಯಿಒಂದ ಶಿಕ್ಷಣ ಬಂದ್ ನಡೆಯಿತು.




