ಕಾಸರಗೋಡು: ನಗರದ ಬ್ಯಾಂಕ್ ರಸ್ತೆ ಸನಿಹ ನೂತನವಾಗಿ ನಿರ್ಮಿಸಲಾಗಿರುವ ವಿನ್-ಟಚ್ ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ ನ. 9ರಂದು ಬೆಳಗ್ಗೆ 10ಕ್ಕೆ ನೆರವೇರಲಿದೆ. ಕೇರಳದ ಆರೋಗ್ಯ ಮತ್ತು ಮಹಿಳಾ-ಮಕ್ಕಳ ಕಲ್ಯಾಣ ಖಾತೆ ಸಚಿವೆ ವೀಣಾ ಜಾರ್ಜ್ ನೂತನ ಆಸ್ಪತ್ರೆ ಕಟ್ಟಡ ಉದ್ಘಾಟಿಸುವರು ಎಂದು ಸಂಸ್ಥೆಯ ಫೌಂಡೇಶನ್ ಚೇರ್‍ಮ್ಯಾನ್ ಅಬ್ದುಲ್ ಲತೀಫ್ ಉಪ್ಪಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ಸಿ.ಎಚ್ ಕುಞಂಬು, ಇ.ಚಂದ್ರಶೇಖರನ್, ಎಂ. ರಆಜಗೋಪಾಲನ್, ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್, ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ಮೊದಲಾದವರುಪಾಲ್ಗೊಳ್ಳುವರು.
ಕಾಸರಗೋಡು ಹೃದಯಭಾಗದಲ್ಲಿ ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಸೌಕರ್ಯವುಳ್ಳ ಆಸ್ಪತ್ರೆ ಇದಾಗಿದೆ. 100 ಹಾಸಿಗೆಗಳ ಬಹುಮಹಡಿಯ ಆಸ್ಪತ್ರೆಯನ್ನು ಅತ್ಯಾಧುನಿಕವಾಗಿ ಸಜ್ಜುಗೊಳಿಸಲಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಹಲವು ಮಂದಿ ಗಡಿದಾಟಿ ಸಂಚರಿಸಲಾಗದೆ ಅನುಭವಿಸಿದ ಸಂಕಷ್ಟ ಮನಗಂಡು ವಿನ್‍ಟಚ್ ಹಾಕಿಕೊಂಡಿದ್ದ ಯೋಜನೆಯನ್ನು ಸಣ್ಣ ಕಾಲಾವಧಿಯಲ್ಲಿ ಪೂರ್ತಿಗೊಳಿಸಿದೆ. 24ತಾಸು ಕಾರ್ಯಾಚರಿಸುವ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಟೀಂ, ಅತ್ಯಾಧುನಿಕ ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನಿಂಗ್, ಡಯಬಿಟಿಕ್ ಕೇರ್ ಮುಂತಾದ ಸೌಲಬ್ಯಗಳಿವೆ,.
ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ನಿರ್ದೇಶಕರಾದ ಅಬ್ದುಲ್ ಕರೀಂ ಕೋಳಿಯಾಟ್, ಹನೀಫ್ ಅರಮನ, ಡಾ. ಇಸ್ಮಾಯಿಲ್ ಪವಾಸ್, ಡಾ, ಮುನಾವರ್ ಡ್ಯಾನಿಷ್, ಡ. ಹನೀಸಾ ಹನೀಫ್, ಡಾ. ಆಯಿಷತ್ ಶಕೀಲಾ, ಮಹಮ್ಮದ್ ಇರ್ಷಾದ್, ಮಹಮ್ಮದ್ ದಿಶ್ಯಾದ್ ಉಪಸ್ಥಿತರಿದ್ದರು.





