ನವದೆಹಲಿ: ಗಾಜಾದಲ್ಲಿ ಹಮಾಸ್ ಒತ್ತಾಯಾಳಾಗಿರುವ ಇಸ್ರೇಲ್ ನಾಗರಿಕರ ಬಿಡುಗಡೆಗಾಗಿ ಈ ದೀಪಾವಳಿಯಲ್ಲಿ ದೀಪ ಬೆಳಗಿಸಿ ಎಂದು ಭಾರತದಲ್ಲಿರುವ ಇಸ್ರೆಲ್ ರಾಯಭಾರಿ ನೌರ್ ಗಿಲೋನ್ ಅವರು ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
0
samarasasudhi
ನವೆಂಬರ್ 09, 2023
ನವದೆಹಲಿ: ಗಾಜಾದಲ್ಲಿ ಹಮಾಸ್ ಒತ್ತಾಯಾಳಾಗಿರುವ ಇಸ್ರೇಲ್ ನಾಗರಿಕರ ಬಿಡುಗಡೆಗಾಗಿ ಈ ದೀಪಾವಳಿಯಲ್ಲಿ ದೀಪ ಬೆಳಗಿಸಿ ಎಂದು ಭಾರತದಲ್ಲಿರುವ ಇಸ್ರೆಲ್ ರಾಯಭಾರಿ ನೌರ್ ಗಿಲೋನ್ ಅವರು ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
X ತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಗಿಲೋನ್ ' 240 ಜನರನ್ನು ಹಮಾಸ್ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ಪ್ರತಿ ವರ್ಷ ದೀಪಗಳನ್ನು ಬೆಳಗುವುದರಿಂದ ಶ್ರೀ ರಾಮನು ದೀಪಾವಳಿ ಆಚರಣೆಗೆ ಆಗಮಿಸುತ್ತಾರೆ ಎನ್ನುವ ನಂಬಿಕೆಯಿದೆ. ಅದೇ ರೀತಿ ದೀಪ ಬೆಳಗಿಸುವುದರಿಂದ ನಮ್ಮ ಪ್ರೀತಿ ಪಾತ್ರರು ಸುರಕ್ಷಿತವಾಗಿ ಮರಳಬಹುದು' ಎಂದು ಬರೆದುಕೊಂಡಿದ್ದಾರೆ.
ಗಾಜಾದಲ್ಲಿನ ನಾಗರಿಕರು ದಕ್ಷಿಣದತ್ತ ಸ್ಥಳಾಂತರಗೊಳ್ಳಲು ಇಸ್ರೇಲ್ ವಾರಗಳವರೆಗೆ ಕಾದಿತ್ತು. ಆದರೆ ಹಮಾಸ್ ಉಗ್ರರು ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಅವರನ್ನು ಅಡಗಿರಿಸಿಕೊಳ್ಳುತ್ತಿದ್ದಾರೆ. ಅವರ ಮೇಲೆ ಅಂತರರಾಷ್ಟ್ರೀಯ ಒತ್ತಡವಿದೆ ಎಂದು ಗಿಲೋನ್ ಹೇಳಿದ್ದಾರೆ.