ಕಾಸರಗೋಡು: ಕುಶಲಕರ್ಮಿಗಳ ಅಭಿವೃದ್ಧಿ ಮತ್ತು ಕ್ಷೇಮಾಭಿವೃದ್ಧಿ ಸಹಕಾರ ಸಂಘದ ನೂತನ ಕಚೇರಿಯು ಕಾಸರಗೋಡಿನ ಕರಂದಕ್ಕಾಡು-ಮಧೂರು ರಸ್ತೆ ಜಂಕ್ಷನ್‍ನಲ್ಲಿ ಕಾರ್ಯಾರಂಭಗೊಂಡಿತು. ಕಾಸರಗೋಡು ನಗರಸಭಾ ಸದಸ್ಯೆ ಪವಿತ್ರಾ ಸಂತೋಷ ನೂತನ ಕಚೇರಿ ಉದ್ಘಾಟಿಸಿದರು.
ಸೊಸೈಟಿ ಅಧ್ಯಕ್ಷ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿ. ಕೆ. ಉಪೇಂದ್ರನ್ ಆಚಾರಿ, ರಾಘವನ್ ಕೊಳತ್ತೂರು, ರಾಷ್ಟ್ರೀಯ ವಿಶ್ವಕರ್ಮ ಫೆಡರೇಶನ್ ಜಿಲ್ಲಾಧ್ಯಕ್ಷ ಸಿ. ಕೆ. ಅಂಬಿ, ವಿ.ವಿ. ಚಂದ್ರನ್, ವಸಂತಿ ಜೆ.ಆಚಾರ್ಯ, ವಿಷ್ಣು ಆಚಾರ್ಯ, ರಾಜನ್ ಮನ್ನಿಪಾಡಿ, ಪಿ. ಕೆ. ವಿಜಯನ್, ವಾಮನ ಆಚಾರ್ಯ, ಎ. ಪದ್ಮಾವತಿ, ಕೆ. ಟಿ. ವನಿತಾ, ಕೆ. ಜಿ. ಓಮನ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಜಯರಾಜನ್ ಸ್ವಾಗತಿಸಿದರು. ಸೊಸೈಟಿ ಉಪಾಧ್ಯಕ್ಷ ರಾಘವನ್ ದೊಡ್ಡುವಯಲ್ ವಂದಿಸಿದರು.





