ಕಾಸರಗೋಡು: ನವಕೇರಳ ಕ್ರಿಯಾ ಯೋಜನೆಯ ಹಸಿರು ಕೇರಳ ಮಿಷನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಂಗವಾಗಿ ನೀರ ಚಿಲುಮೆ ಜಲಸಂರಕ್ಷಣಾ ಯೋಜನೆಯ ಜಿಲ್ಲಾಮಟ್ಟದ ಕಾರ್ಯಯೋಜನೆಗೆ ಚಾಲನೆ ನೀಡಲಾಯಿತು.
ಮಡಿಕೈ ಗ್ರಾಮ ಪಂಚಾಯಿತಿಯ ಏಚಿಕ್ಕಾಣದಲ್ಲಿ ನಡೆದ ಸಮಾರಂಭದಲ್ಲಿ ಜಿಪಂ ಅಧ್ಯಕ್ಷೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಯೋಜನೆಯ ಚಿಲುಮೆ ನೀರು ಸಂರಕ್ಷಣಾ ಚಟುವಟಿಕೆಗಳನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿ.ಪ್ರಕಾಶನ್ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾಞಂಗಾಡು ಬ್ಲಾಕ್ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಎಂ. ಅಬ್ದುಲ್ ರಹಮಾನ್,
ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಮಾಪದ್ಮನಾಭನ್, ಪಂಚಾಯಿತಿ ಸದಸ್ಯ ಎ.ವೇಲಾಯುಧನ್, ಜಂಟಿ ಬಿಡಿಒ ಶ್ರೀಕಲಾ, ಸಹಾಯಕ ಎಂಜಿನಿಯರ್ ಅಖಿಲ್, ಉದ್ಯೋಗಖಾತ್ರಿ ಬ್ಲಾಕ್ ಎಂಜಿನಿಯರ್ ಶ್ರೀಜೇಶ್, ಎ.ಇ ಅವಿನಾಶ್, ಕೃಷಿ ಅಧಿಕಾರಿ ಪ್ರಮೋದ್ ಉಪಸ್ಥಿತರಿದ್ದರು. ಉದ್ಯೋಗ ಖಾತ್ರಿ ಯೋಜನೆಯ ಜಂಟಿ ಕಾರ್ಯಕ್ರಮ ಸಂಯೋಜಕ ಡಿ.ವಿ.ಅಬ್ದುಲ್ ಜಲೀಲ್ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ಬಿಜು ವಂದಿಸಿದರು.





