ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ಭೌತಶಾಸ್ತ್ರ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಉದಯೋನ್ಮುಖ ವಿದ್ಯಮಾನಗಳ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಸಂಪನ್ನಗೊಂಡಿತು.
ಯೂನಿವರ್ಸಿಟಿ ಕಾಲೇಜ್ ಲಂಡನ್‍ನ ನ್ಯಾನೊ ಎಲೆಕ್ಟ್ರಾನಿಕ್ಸ್‍ನ ಪೆಂಟರ್ ಚೇರ್ ಪೆÇ್ರಫೆಸರ್ ಸರ್ ಮೈಕೆಲ್ ಪೆಪ್ಪರ್ ಸಮಾರೋಪ ಭಾಷಣ ಮಾಡಿದರು. ಪೆÇ್ರ. ಕಾಂತಿಮಯಿ ದಾಸ್ ಗುಪ್ತಾ (ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ), ಡಾ. ಮಧು ತಲಕುಲಂ (ಐಸರ್, ತಿರುವನಂತಪುರ), ಡಾ. ಚೆಂಗ್ಯು ಯಾನ್ (ಚೀನಾ), ತನ್ವೀರ್ ಆಲಂ (ಭೂಪೇಂದ್ರ ನಾರಾಯಣ್ ಮಂಡಲ್ ವಿಶ್ವವಿದ್ಯಾಲಯ, ಬಿಹಾರ), ಪೆÇ್ರ. ಜಿನ್ ಜೋಸ್ (ಯೂನಿವರ್ಸಿಟಿ ಆಫ್ ಲೀಡ್ಸ್, ಯುಕೆ), ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ (ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ), ಡಾ. ಮಂಜು ಪಿ (ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ), ಗಿನಾ ಬೆನ್ನಿ (ವಿಶ್ವವಿದ್ಯಾಲಯಲೀಡ್ಸ್, ಯುಕೆ) ಅವರು ವಿವಿಧ ಸೆಷನ್‍ಗಳನ್ನು ನಡೆಸಿಕೊಟ್ಟರು. ಭಾರತ ಮತ್ತು ವಿದೇಶದ ಪ್ರಮುಖ ಸಂಸ್ಥೆಗಳ ತಜ್ಞರು ಮತ್ತು ಸಂಶೋಧಕರು ಸಮ್ಮೇಳನದಲ್ಲಿ ಪಾಲ್ಗೊಮಡಿದ್ದರು.




