HEALTH TIPS

ನ. 5ರಂದು ಕಾಞಂಗಾಡಿನಲ್ಲಿ ಸೆವೆನ್ಸ್ ಫುಟ್‍ಬಾಲ್ ಪಂದ್ಯಾಟ

 

                ಕಾಸರಗೋಡು: ಕೇರಳದಲ್ಲಿ ಅಖಿಲ ಭಾರತ ಫುಟ್‍ಬಾಳ್ ಪಂದ್ಯಾವಳಿಗಳನ್ನು ಆಯೋಜಿಸುವ ಸೆವೆನ್ಸ್ ಫುಟ್‍ಬಾಲ್ ಅಸೋಸಿಯೇಷನ್ ವತಿಯಿಂದಅಸೋಸಿಯೇಶನ್‍ನ 24 ನೇ ರಾಜ್ಯ ಸಮ್ಮೇಳನವು   ನವೆಂಬರ್ 5 ರಂದು  ಬೆಳಿಗ್ಗೆ 10ಕ್ಕೆ ಕಾಞಂಗಾಡಿನ ಎಮಿರೇಟ್ಸ್ ಹೋಟೆಲ್ ಮೈದಾನದಲ್ಲಿ ಜರುಗಲಿದೆ.

              ಕೇರಳ ಕ್ರೀಡಾಪರಿಷತ್ತಿನ ರಾಜ್ಯಾಧ್ಯಕ್ಷ, ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಹಾಗೂ ಶ್ರೇಷ್ಠ ಸಂಘಟಕ ಯು.ಶರಫಿಲಿ ಪಂದ್ಯಾಟ ಉದ್ಘಾಟಿಸುವರು. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ  ಕೇರಳದಲ್ಲಿ 2022 - 2023 ಸೆವೆನ್ಸ್ ಫುಟ್‍ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಸಂಘಟಕರಿಗೆ ಪ್ರಶಸ್ತಿ ವಿತರಣೆಯನ್ನು ನಡೆಸಲಿದ್ದಾರೆ. ಕಾಞಂಗಾಡ್ ಶಾಸಕ ಚಂದ್ರಶೇಖರನ್ ಅವರು 2022 - 2023ರ ಫುಟ್ ಬಾಲ್ ಋತುವಿನ ಕೇರಳದ ಅತ್ಯುತ್ತಮ ಫುಟ್ಬಾಲ್ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries