HEALTH TIPS

ಶಿಕ್ಷಕರ ನಡುವೆ ವಾಕ್ ತರ್ಕ, ಮುಷ್ಟಿಯುದ್ಧ: ಸಂಘರ್ಷದಲ್ಲಿ ಏಳು ಮಂದಿ ಗಾಯ

                  ಕೋಝಿಕ್ಕೋಡ್: ಎರವನ್ನೂರ್ ಯುಪಿ ಶಾಲೆಯಲ್ಲಿ ಸಿಬ್ಬಂದಿ ಸಭೆಯ ವೇಳೆ ಶಿಕ್ಷಕರ ನಡುವೆ ಮಾತಿನ ಚಕಮಕಿ, ಕೈಕೈ ಮಿಲಾಯಿಸಿದ ಘಟನೆ ನಡೆದಿದೆ.

                       ಸಂಘರ್ಷದಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಮಕ್ಕಳಿಗೆ ಥಳಿಸಿದ ಆರೋಪವಿದೆ. ಈ ವಿಚಾರದಲ್ಲಿ ಉಂಟಾದ ಜಗಳ ಸಂಘರ್ಷಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ.

                     ಶಾಲಾ ಶಿಕ್ಷಕಿ ಸುಪ್ರೀನಾ, ಸುಪ್ರೀನಾ ಅವರ ಪತಿ ಶಾಜಿ ಹಾಗೂ ಇತರ ಶಿಕ್ಷಕರಾದ ಪಿ.ಉಮ್ಮರ್, ವಿ.ವೀಣಾ, ಕೆ.ಮಹಮ್ಮದ್ ಆಸಿಫ್, ಅನುಪಮಾ, ಎಂ.ಕೆ.ಜಸ್ಲಾ ಗಾಯಗೊಂಡಿದ್ದಾರೆ. ಸುಪ್ರೀನಾ ಮತ್ತು ಅವರ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬೇರೆ ಶಾಲೆಯ ಶಿಕ್ಷಕ ಶಾಜಿ ಬಂದಿದ್ದರು.

                     ಸಿಬ್ಬಂದಿ ಕೌನ್ಸಿಲ್ ಸಭೆಗೆ ಅತಿಕ್ರಮ ಪ್ರವೇಶ ಮಾಡಿ ಶಾಜಿ ಹಲ್ಲೆ ನಡೆಸಿದ್ದಾರೆ ಎಂದು  ಇತರ ಶಿಕ್ಷಕರ ದೂರುಗಳು. ಆದರೆ, ಬೇರೆ ಶಿಕ್ಷಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಪ್ರೀನಾ ಮತ್ತು ಶಾಜಿ ಹೇಳುತ್ತಾರೆ. ಗಾಯಗೊಂಡ ಏಳು ಮಂದಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries