ಎರ್ನಾಕುಳಂ: ಎಂಟು ವರ್ಷದ ಬಾಲಕಿಗೆ ಯುವಕರು ಬಂದೂಕು ತೋರಿಸಿ ಬೆದರಿಸಿದ ಘಟನೆ ನಡೆದಿದೆ. ತಂದೆಯೊಂದಿಗೆ ಅಂಗಡಿಗೆ ಬಂದ ಬಾಲಕಿ ಕಾರಿನಲ್ಲಿ ಕುಳಿತಿದ್ದ ವೇಳೆ ಬೈಕ್ ನಲ್ಲಿ ಬಂದ ಯುವಕರು ಗನ್ ತೋರಿಸಿ ಬೆದರಿಸಿದ್ದಾರೆ.
ಎರ್ನಾಕುಳಂ ಈಸ್ಟ್ ತಾಮರಾಚಲ ಪ್ರದೇಶದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಬಾಲಕಿ ಕೂಗಿಕೊಂಡಾಗ ಯುವಕ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಆಗ ಸ್ಥಳೀಯರು ಓಡಿ ಬಂದಾಗ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು.
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿ ಈ ಯುವಕನನ್ನು ಗುರುತಿಸಿದ್ದಾಳೆ ಎಂದು ತಡಿಯಿಟ್ಟ ಪರಂಬ್ ಪೋಲೀಸರು ತಿಳಿಸಿದ್ದಾರೆ. ವಿಚಾರಣೆಯ ನಂತರವμÉ್ಟೀ ಹೆಚ್ಚಿನ ಮಾಹಿತಿ ತಿಳಿಯಬಹುದು ಎಂದು ಪೆÇಲೀಸರು ತಿಳಿಸಿದ್ದಾರೆ.


