ಮಂಜೇಶ್ವರ: ನವೆಂಬರ್ 18 ರಂದು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಪೈವಳಿಕೆಯಲ್ಲಿ ನಡೆಯಲಿರುವ ನವ ಕೇರಳ ಸಮಾವೇಶದ ಹಿನ್ನೆಲೆಯಲ್ಲಿ ಬಂದರು, ಪುರಾತತ್ವ ಮತ್ತು ಇತಿಹಾಸ- ವಸ್ತುಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರ ಕೋವಿಲ್ ಅವರ ಅಧ್ಯಕ್ಷತೆಯಲ್ಲಿ ಪೈವಳಿಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಿದ್ಧತೆಗಳ ಪರಿಶೀಲನಾ ಸಭೆ ನಡೆಯಿತು. ಮುಖ್ಯಮಂತ್ರಿ ಸಹಿತ ಸಚಿವರುಗಳ ನೇತೃತ್ವದಲ್ಲಿ ರಾಜ್ಯದ ಮೊದಲ ನವಕೇರಳ ಸಮಾವೇಶ ಮಂಜೇಶ್ವರ ವೇದಿಕೆಯಾಗಲಿದೆ. ಮೊದಲ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ರೂಪಿಸಿ ಉತ್ತಮ ಮಾದರಿಯಾಗಲು ಎಲ್ಲರೂ ಸಹಕರಿಸಬೇಕು ಎಂದು ಸಚಿವರು ಈ ಸಂದರ್ಭ ತಿಳಿಸಿದರು. ಉಪಸಮಿತಿಯ ಸಂಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಂಘಟನಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅವರು ಕ್ಷೇತ್ರದ ಕಾರ್ಯ ಪ್ರಗತಿ ಹಾಗೂ ಮುಂದಿನ ಚಟುವಟಿಕೆಗಳನ್ನು ವಿವರಿಸಿದರು.
ನವೆಂಬರ್ 18 ರಂದು ಮಧ್ಯಾಹ್ನ 2 ಕ್ಕೆ ಕಲಾ ಕಾರ್ಯಕ್ರಮದೊಂದಿಗೆ ನವಕೇರಳ ಸಮಾವೇಶ ಆರಂಭವಾಗಲಿದೆ. ಕಾರ್ಯಕ್ರಮದ ಪ್ರಚಾರಕ್ಕಾಗಿ ವ್ಯಾಪಕ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಕ್ಷೇತ್ರದ ಎಲ್ಲ ಪಂಚಾಯಿತಿಗಳ ಕುಟುಂಬಶ್ರೀ ಸಿಡಿಎಸ್ ಸಭೆ ನಡೆಯುತ್ತಿದೆ. ಎಸ್.ಸಿ. ಮತ್ತು ಎಸ್.ಟಿ. ವರ್ಗಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನವೆಂಬರ್ 2 ರಂದು ಮಂಜೇಶ್ವರಂ ಬ್ಲಾಕ್‍ನಲ್ಲಿ ಎಸ್‍ಸಿ ಮತ್ತು ಎಸ್‍ಟಿ ಪ್ರವರ್ತಕರ ಸಭೆ ನಡೆಯಿತು. ಕ್ಷೇತ್ರದ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು, ಪಿಟಿಎ ಅಧ್ಯಕ್ಷರು, ವ್ಯವಸ್ಥಾಪಕರ ಜಂಟಿ ಸಭೆಯೂ ನಡೆಯಿತು. ನವೆಂಬರ್ 4 ಮತ್ತು 5 ರಂದು ‘ಮನೆಯಂಗಳದ ಸಮಾವೇಶ’ ನಡೆಯಲಿದೆ. ನವೆಂಬರ್ 12 ರಂದು ದೀಪಾವಳಿಯ ದಿನದಂದು ಪ್ರತಿ ಮನೆಯಲ್ಲೂ ನವಕೇರಳ ದೀಪ ಬೆಳಗುವ ಸಮಾರಂಭ ನಡೆಯಲಿದೆ. 15 ಮತ್ತು 16ರಂದು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ಜಾಥಾ ನಡೆಯಲಿದೆ. ಬೀದಿ ಚಿತ್ರಕಲೆ ಆಯೋಜಿಸಲಾಗುವುದು. ಸ್ವಯಂಸೇವಕ ಸಮಿತಿಯು ಯುವ ಕಲ್ಯಾಣ ಮಂಡಳಿಯ ಅಡಿಯಲ್ಲಿ ಸ್ವಯಂಸೇವಕರನ್ನು ಸಹ ಒಳಗೊಂಡಿರುತ್ತದೆ. ಪೋಲೀಸ್, ಅಗ್ನಿ ರಕ್ಷಾ ಸೇನೆ, ಸ್ಕೌಟ್ ಮತ್ತು ಗೈಡ್ಸ್, ಎನ್.ಎಸ್.ಎಸ್., ಎನ್.ಸಿ.ಸಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಭೆ ಕರೆಯಲಾಗುವುದು.
ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್, ಸಂಘಟನಾ ಸಮಿತಿ ಸಂಚಾಲಕ ಆರ್‍ಡಿಒ ಅತುಲ್ ಸ್ವಾಮಿನಾಥ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಆರ್.ಜಯಾನಂದ, ಪೈವಳಿಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿ.ಜಗದೀಶ್, ಸಾಂಸ್ಕøತಿಕ ಸಮಿತಿ ಸಂಚಾಲಕರಾದ ಸಣ್ಣ ನೀರಾವರಿ ಸಹಾಯಕ ಎಂಜಿನಿಯರ್ ಇ.ಕೆ.ಅರ್ಜುನನ್, ಪ್ರಚಾರ ಸಮಿತಿ ಸಂಚಾಲಕರಾದ ಸಹಕಾರಿ ಇಲಾಖೆ ಸಹಾಯಕ ನಿಬಂಧಕ ಎ.ನಾಗೇಶ್ ಮಾತನಾಡಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ವಿವಿಧ ಸ್ಥಳೀಯಾಡಳಿತ ಮುಖಂಡರು, ಸದಸ್ಯರು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು. ನವಕೇರಳ ಸಮಾವೇಶಕ್ಕೆ ವೇದಿಕೆಯಾಗಲಿರುವ ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಮೈದಾನಕ್ಕೆ ಸಚಿವರು ಭೇಟಿ ನೀಡಿದರು. ನಂತರ ಸ್ಥಳ ಮತ್ತು ಆಸನಗಳ ವಿನ್ಯಾಸವನ್ನು ಪರಿಶೀಲಿಸಲಾಯಿತು.




.jpeg)
