ಉಪ್ಪಳ: ಮಂಜೇಶ್ವರ ಕ್ಷೇತ್ರದಲ್ಲಿ ನವ ಕೇರಳ ಸಮಾವೇಶದ ಅಂಗವಾಗಿ ಪೈವಳಿಕೆ ನಗರ ಪೇಟೆಯಲ್ಲಿ ಸ್ಥಾಪಿಸಲಾದ ಸಂಘಟನಾ ಸಮಿತಿ ಕಚೇರಿಯನ್ನು ಸಚಿವ ಅಹ್ಮದ್ ದೇವರ್ಕೋವಿಲ್ ಉದ್ಘಾಟಿಸಿದರು. ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರು ಸಾರ್ವಜನಿಕರ ಮುಂದೆ ಬರುತ್ತಿರುವುದು ಇತಿಹಾಸವಾಗಲಿದೆ ಎಂದ ಅವರು, ಅಧಿಕಾರ ಜನರ ಮೇಲಿದೆ ಎಂಬ ಸರ್ಕಾರದ ನಂಬಿಕೆಯ ಮೇಲೆ ನವಕೇರಳ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಮಾತನಾಡಿ, ನವಕೇರಳ ಸಮಾವೇಶಕ್ಕೆ ಸಮಾಜದ ಎಲ್ಲ ವರ್ಗದವರ ಸಹಕಾರ ದೊರೆಯಬೇಕು ಎಂದರು. ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನ್ ಲವಿನೊ ಮೊಂತೇರೊ, ವರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಭಾರತಿ, ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಯಂತಿ ಮಾತನಾಡಿದರು. ಸಂಘಟನಾ ಸಮಿತಿಯ ಸಂಚಾಲಕ ಆರ್‍ಡಿಒ ಅತುಲ್ ಸ್ವಾಮಿನಾಥ್ ಸ್ವಾಗತಿಸಿ, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ವಂದಿಸಿದರು.




.jpeg)
.jpeg)
