ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 1.2ಕೋಟಿ ರೂ. ಮೌಲ್ಯದ ಚಿನ್ನ ವಶಫಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಿಬ್ಬರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಕಾಸರಗೋಡು ಉದುಮ ನಿವಾಸಿ ಅಲ್‍ಅಮೀನ್, ತಳಂಗರೆ ನಿವಾಸಿ ರಫೀಕ್ ಹಾಗೂ ಕೋಯಿಕ್ಕೋಡ್ ಕೊಡುವಳ್ಳಿ ನಿವಾಸಿ ಜಂಶಾದ್ ಬಂಧಿತರು.
ಉದುಮ ನಿವಾಸಿ ಅಲ್‍ಅಮೀನ್‍ನಿಂದ 2752088ರೂ. ಮೌಲ್ಯದ454.14ಗ್ರಾಂ ಚಿನ್ನ, ತಳಂಗರೆ ನಿವಾಸಿ ರಫೀಕ್‍ನಿಂದ 1463490ರೂ. ಮೌಲ್ಯದ 241ಗ್ರಾಂ ಚಿನ್ನ ಹಾಗೂ ಕೊಡುವಳ್ಳಿ ನಿವಾಸಿ ಜಂಶಾದ್‍ನಿಂದ6011520ರೂ. ಮೌಲ್ಯದ 992ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಅಲ್‍ಅಮೀನ್ ಮತ್ತು ರಫೀಕ್ ಚಿನ್ನವನ್ನು ಪೇಸ್ಟ್ ರೂಪದಲ್ಲಾಗಿಸಿ ಜೀನ್ಸ್ ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಹಾಗೂ ಜಂಶಾದ್ ಚಿನ್ನವನ್ನು ಗುಳಿಗೆಗಳನ್ನಾಗಿಸಿ ಶರೀರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ.





