ಕುಂಬಳೆ: ಕುಂಬಳೆ ರೈಲು ನಿಲ್ದಾಣದ ಅವ್ಯವಸ್ಥೆ, ಅನಾದಾರ ಪ್ರತಿಭಟಿಸಿ ಮೊಗ್ರಾಲ್ ದೇಶೀಯವೇದಿ ಬುಧವಾರ ಮೊದಲ ಹಂತದ ಧರಣಿ ಪ್ರತಿಭಟನೆಯನ್ನು ಪಕ್ಷಾತೀತವಾಗಿ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಆಯೋಜಿಸಿತು.
ನೀಲೇಶ್ವರ ನಗರಸಭೆಯ ಮಾಜಿ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಉದ್ಘಾಟಿಸಿದರು. ಕುಂಬಳೆ ರೈಲು ನಿಲ್ದಾಣ 40 ಎಕರೆಯಲ್ಲಿ ಸ್ವಂತ ಜಮೀನು ಹೊಂದಿದ್ದು, ಪ್ರಯಾಣಿಕರಿಂದ ತುಂಬಿ ಉತ್ತಮ ಆದಾಯ ಹೊಂದಿರುವ ನಿಲ್ದಾಣವನ್ನು ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷಿಸುವ ನೀತಿಯನ್ನು ಬದಲಾಯಿಸಲು ರೈಲ್ವೆ ಅಧಿಕಾರಿಗಳು ಸಿದ್ಧರಾಗಬೇಕು ಎಂದು ಜಯರಾಜನ್ ಆಗ್ರಹಿಸಿದರು.
ಆದಾಯ ಗಮನಿಸಿ ಪ್ರಯಾಣಿಕರಿಗೆ ಅನುಗುಣವಾಗಿ ನಿಲ್ದಾಣದಲ್ಲಿ ಮೂಲ ಅಭಿವೃದ್ಧಿ ಸೌಲಭ್ಯಗಳನ್ನು ಒದಗಿಸುವುದು, ಹೆಚ್ಚು ದೂರದ ರೈಲುಗಳಿಗೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸುವುದು, ಪ್ರಯಾಣಿಕರನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಪ್ಲಾಟ್‍ಫಾರ್ಮ್‍ಗೆ ಸಾಕಷ್ಟು ಸೂರು ನಿರ್ಮಿಸುವುದು, ರಾತ್ರಿಯಲ್ಲಿ ಪ್ಲಾಟ್‍ಫಾರ್ಮ್‍ನಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು, ನಿಲ್ದಾಣದಲ್ಲಿ ಕಾಯ್ದಿರಿಸುವ ಸೌಲಭ್ಯ ಒದಗಿಸುವುದು, ನಿಲ್ದಾಣಕ್ಕೆ ಪೂರಕವಾಗಿ ಸುಮಾರು 40 ಎಕರೆ ಜಮೀನಿರುವುದರಿಂದ ಕಾಸರಗೋಡು ಮತ್ತು ಮಂಗಳೂರು ಕೇಂದ್ರವಾಗಿಸಿ ಕುಂಬಳೆಯನ್ನು "ಸ್ಯಾಟಲೈಟ್" ಸ್ಟೇಷನ್ ಆಗಿ ಸ್ಟೇ ಬ್ಲಿಂಗ್ ಲೈನ್‍ಗಳು, ಪಿಟ್ ಲೈನ್ ಮತ್ತು ಲೋಕೋ ಸ್ಟಾಫ್ ರನ್ನಿಂಗ್ ರೂಂ ಸ್ಥಾಪಿಸಿ ಅಭಿವೃದ್ಧಿಪಡಿಸುವುದು ತುರ್ತು ಅಗತ್ಯ ಎಂದು ಒತ್ತಾಯಿಸಲಾಯಿತು.
ಮೊಗ್ರಾಲ್ ದೇಶೀಯ ವೇದಿ ಅಧ್ಯಕ್ಷ ಎಂ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಿ ಮೊಹಮ್ಮದ್ ನಿಸಾರ್ ವಿಷಯ ಮಂಡಿಸಿದರು. ಆರ್.ಪ್ರಶಾಂತ್, ರಿಯಾಝ್ ಮೊಗ್ರಾಲ್, ಎ.ಕೆ.ಆರಿಫ್, ಅಬ್ದುಲ್ಲಾ ತಾಜ್, ಮಮ್ಮು ಮುಬಾರಕ್, ಸತ್ತಾರ್ ಆರಿಕಾಡಿ, ಎಂ. ಖಾಲಿದ್ ಹಾಜಿ, ಟಿ.ಎಂ.ಶುಹೈಬ್, ಮಾಹಿನ್ ಮಾಸ್ಟರ್, ಅಹ್ಮದಲಿ ಕುಂಪಲ, ಸಿದ್ದೀಕ್ ರಹಮಾನ್, ಸಿ.ಎಂ.ಹಂಝ, ಬಶೀರ್ ಅಹ್ಮದ್, ಮುಕುಂದನ್ ಮಾಸ್ಟರ್, ಝಡ್.ಎ.ಮೊಗ್ರಾಲ್, ಟಿ.ಕೆ.ಜಾಫರ್, ಹಮೀದ್ ಕಾವಿಲ್, ವೆಂಕಟೇಶ್, ಖದೀಜಾ ಮೊಗ್ರಾಲ್, ಇಸ್ಮಾಯಿಲ್ ಮೂಸಾ, ಮುಹಮ್ಮದ್ ಮೊಗ್ರಾಲ್, ಎಂ.ಜಿ.ಎ. ಅಬ್ದುಲ್ಲ ಕುಂಞÂ್ಞ ನಡುಪಾಲ, ಮುಹಮ್ಮದ್ ಕುಂಞÂ್ಞ ಟೈಲ್ಸ್, ಬಿ.ಎ.ಮುಹಮ್ಮದ್ ಕುಂಞÂ್ಞ ಮಾತನಾಡಿದರು.
ಜೊತೆ ಕಾರ್ಯದರ್ಶಿ ರಿಯಾಝ್ ಕರೀಂ ಸ್ವಾಗತಿಸಿ, ಕೋಶಾಧಿಕಾರಿ ಎಚ್. ಎಂ ಕರೀಂ ವಂದಿಸಿದರು.




.jpg)
