ಕುಂಬಳೆ: ಅನಂತಪುರ ಕೈಗಾರಿಕಾ ಪ್ರಾಂಗಣದಿಂದ ಹೊರಬರುವ ತ್ಯಾಜ್ಯಗಳ ಸಮರ್ಪಕ ಸಂಸ್ಕರಣೆಗಳಿಲ್ಲದೆ ಪರಿಸರ ಪ್ರದೇಶ ಅನುಭವಿಸುತ್ತಿರುವ ದುರ್ಗಂಧ ಸಹಿತ ಸಾರ್ವಜನಿಕ ಪ್ರಕೋಪಗಳಿಗೆ ಎದುರಾಗಿ ಸ್ಥಳೀಯರಿಂದ ಒಳಗೊಂಡ ಹೋರಾಟ ಕ್ರಿಯಾ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ- ‘ಅನಂತಪುರ ಸತ್ಯಾಗ್ರಹ’ ಇದೀಗ ಕೊನೆಗೂ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಗಳತ್ತ ಸಾಗಿದೆ.
ನವೆಂಬರ್ 6 ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳಂತೆ ದುರ್ಗಂಧ ಬೀರುತ್ತಿರುವ ಅನಂತಪುರ ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಹೊರಸೂಸುವ ವಾಸನೆಯ ಸಮಸ್ಯೆಯನ್ನು ಎರಡು ತಿಂಗಳಿನೊಳಗೆ ಸಂಪೂರ್ಣವಾಗಿ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಲಿಖಿತವಾಗಿ ಭರವಸೆ ನೀಡಿರುತ್ತಾರೆ.
ಪರಿಸರಸ್ನೇಹಿ ಕೈಗಾರಿಕಾ ಘಟಕಗಳನ್ನು ಮಾತ್ರ ಅನಂತಪುರದಲ್ಲಿ ಸ್ಥಾಪಿಸಲು ಅವಕಾಶ ನೀಡಬೇಕೆಂಬ ಅನಂತಪುರ ಉಳಿಸಿ ಕ್ರಿಯಾ ಸಮಿತಿಯ ಬೇಡಿಕೆಯನ್ನು ಸÀರ್ಕಾರದ ಮುಂದೆ ವಿವರಿಸುವುದಾಗಿ ಅವರು ತಿಳಿಸಿರುತ್ತಾರೆ .
ಪ್ರದೇಶದಲ್ಲಿ ಅಗತ್ಯವಿರುವ ರೀತಿಯ ಚರಂಡಿ ವ್ಯವಸ್ಥೆಯನ್ನು ಆದಷ್ಟು ಬೇಗನೆ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಜಿಲ್ಲಾಧಿಕಾರಿಯವರ ಮೇಲೆ ವಿಶ್ವಾಸವಿಟ್ಟು ಅನಂತಪುರ ಉಳಿಸಿ ಕ್ರಿಯಾ ಸಮಿತಿಯು ತಾತ್ಕಾಲಿಕವಾಗಿ ಈ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಇಂದು(ನವಂಬರ್ 9) ಕೊನೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸತ್ಯಾಗ್ರಹ ಕ್ರಿಯಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ..




.jpg)
