ತಿರುವನಂತಪುರಂ: ಸೆಕ್ರೆಟರಿಯೇಟ್‍ಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಕೇರಳ ಪೋಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಪೆÇಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ಬೆದರಿಕೆ ಸಂದೇಶ ತಲುಪಿತ್ತು.
ಘಟನೆ ನಡೆದ ಮೊದಲ ನಿಮಿಷದಲ್ಲಿ ಪೆÇಜ್ಜಿಯೂರಿನಿಂದ ಸಂದೇಶ ಬಂದಿದೆ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಸೈಬರ್ ಪೆÇಲೀಸರ ನೆರವಿನಿಂದ ಕರೆ ಮಾಡಿದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಕುಳತ್ತೂರು ಮೂಲದ ನಿತಿನ್ ನನ್ನು ಬಂಧಿಸಲಾಗಿದೆ. ಆತನನ್ನು ಪೆÇಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಾಂಬ್ ಸ್ಕ್ವಾಡ್ ಸಂದೇಶದ ಬಗ್ಗೆ ತನಿಖೆ ನಡೆಸುತ್ತಿದೆ. ಮಧ್ಯಾಹ್ನದ ವೇಳೆಗೆ ಸೆಕ್ರೆಟರಿಯೇಟ್ ಒಳಗೆ ಮತ್ತು ಹೊರಗೆ ಬಾಂಬ್ ಇಡಲಾಗುವುದು ಎಂಬ ಸಂದೇಶ ನೀಡಲಾಗಿತ್ತು. ಸಂದೇಶವು ಗಂಭೀರವಾಗಿಲ್ಲ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ.


