HEALTH TIPS

ಅಧ್ಯಯನ ಪ್ರವಾಸ-ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳು, ಶಿಕ್ಷಕರ ಭೇಟಿ

 

                  

                  ಕಾಸರಗೋಡು: ವಿದೇಶಿ ವಿದ್ಯಾರ್ಥಿಗಳ ತಂಡವೊಂದು ಅಧ್ಯಯನ ಪ್ರವಾಸ ಹಿನ್ನೆಲೆಯಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ಗೆ ಭೇಟಿ ನೀಡಿತು.  ಪೋರ್ಟ್‍ಲ್ಯಾಂಡ್‍ನ  ಲೂಯಿಸ್ ಏಂಡ್ ಕ್ಲಾರ್ಕ್ ಕಾಲೇಜ್ ಪ್ರಾಧ್ಯಾಪಕರಾದ ಪ್ರೊ. ಕೋಲಿ ಮೇಸನ್, ಪೆÇ್ರ. ಶಿವಾನಿ ಜೋಶಿ ಮತ್ತು 12 ಮಂದಿ ಲಿಬರಲ್ ಆಟ್ರ್ಸ್ ವಿದ್ಯಾರ್ಥಿಗಳು ಅಧ್ಯಯನ ತಂಡದಲ್ಲಿದ್ದರು.

                  ವಿಶ್ವವಿದ್ಯಾಲಯಕ್ಕೆ ನ. 6ರಂದು ತಲುಪಿದ ತಂಡ, ವಿವಿಧ ವಿಭಾಗಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿತು. ದೇಶದ ವಿವಿಧ ರಾಜ್ಯಗಳು ಮತ್ತು ಕೇರಳದ ರಾಜಧಾನಿ ತಿರುನಂತಪುರಕ್ಕೆ ಭೇಟಿ ನೀಡಿದ ನಂತರ ಅವರು ಪೆರಿಯಾ ಕ್ಯಾಂಪಸ್‍ಗೆ ತಲುಪಿದ್ದರು. ಅಂತಾರಾಷ್ಟ್ರೀಯ ಸಂಬಂಧಗಳು,  ರಾಜಕೀಯ ವಿಭಾಗ ಮತ್ತು ಅಮೇರಿಕನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ಪ್ರಸಕ್ತ ಭೇಟಿಯನ್ನು  ಆಯೋಜಿಸಿತ್ತು.

              ಪ್ರಭಾರ ಉಪ ಕುಲಪತಿ ಪೆÇ್ರ. ಕೆ.ಸಿ. ಬೈಜು ಅವರೊಂದಿಗೆ ಸಮಾಲೋಚನೆ ನಡೆಸಿದ ತಂಡ, ಭಾರತ ಮತ್ತು ಕೇರಳ ತಮ್ಮನ್ನು ಅಚ್ಛರಿಗೊಳಿಸಿದೆ,  ಮತ್ತು ಮರೆಯಲಾಗದ ಅನುಭವಗಳನ್ನು ನೀಡಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆ ಉತ್ತಮವಾಗಿದ್ದು,  ಭಾರತದ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಭೇಟಿ ಸಹಾಯ ಮಾಡಿರುವುದಾಗಿ ಅಧ್ಯಯನಕಾರರ ತಂಡ ವಿವರಿಸಿದರು. ಅಕಾಡೆಮಿಯಲ್ಲಿ ಇಂತಹ ಚರ್ಚೆಗಳನ್ನು ನಡೆಸುವುದು ಅತ್ಯಗತ್ಯ. ಹೊಸ ಆಲೋಚನೆಗಳು ಮತ್ತು ಇವುಗಳ ವಿನಿಮಯವೂ ಇದರಿಂದ ಸಾಧ್ಯವಾಗುತ್ತದೆ. ಇದಕ್ಕೆ ವಿಶ್ವವಿದ್ಯಾನಿಲಯ ವೇದಿಕೆ ಕಲ್ಪಿಸಲಿದೆ ಎಂದು ಪೆÇ್ರ ಕೆ.ಸಿ. ಬೈಜು ತಿಳಿಸಿದರು.  ವಿಭಾಗ ಮುಖ್ಯಸ್ಥ ಪೆÇ್ರ. ಆರ್. ಸುರೇಶ್, ಸಹಾಯಕ ಪ್ರಾಧ್ಯಾಪಕ ಡಾ. ರೆನ್ಹಾರ್ಟ್ ಫಿಲಿಪ್ ªಉಪಸ್ಥಿತರಿದ್ದರು.  ಭೇಟಿಯ ಸ್ಮರಣಾರ್ಥ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕ್ಯಾಂಪಸ್ ಆವರಣದಲ್ಲಿ ಮಾವಿನ ಸಸಿಗಳನ್ನು ನೆಟ್ಟರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries