ಪೆರ್ಲ; ಎಣ್ಮಕಜೆ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ 14ನೇ ವರ್ಷದ ಜಬ್ಬಾರ್ ಸಂಸ್ಮರಣೆ ಪೆರ್ಲದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಜಬ್ಬಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಯೂತ್ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಪಿ.ವಿ.ಪ್ರದೀಪ್ ಕುಮಾರ್ ಸಂಸ್ಮರಣಾ ಭಾಷಣಗೈದರು. ಎಣ್ಮಕಜೆ ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆವಹಿಸಿದ್ದರು.
ಕಾರ್ತಿಕೇಯನ್ ಪೆರಿಯ,ರಾಧಾಕೃಷ್ಣ ಮಾಸ್ತರ್, ಬ್ಲಾಕ್ ಕಾಂಗ್ರೆಸ್ ನೇತಾರ ಅಮು ಅಡ್ಕಸ್ಥಳ, ಅಬ್ದುಲ್ಲ ಕುರೆಡ್ಕ,ನ್ಯಾಯವಾದಿ ಸುಧಾಕರ ರೈ ಕಾಟುಕುಕ್ಕೆ,ಲೋಕನಾಥ ಶೆಟ್ಟಿ ಮಾಯಿಲೆಂಗಿ, ರಸಾಕ್ ನಲ್ಕ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರನಾಥ ನಾಯಕ್ ಶೇಣಿ ಸ್ವಾಗತಿಸಿ ಫಾರೂಕ್ ಎಫ್ ಆರ್ ಕೆ ವಂದಿಸಿದರು.

.jpg)
