HEALTH TIPS

ಗುಣದಿಂದ ಸುಸಂಸ್ಕøತಿ-ಡಾ.ಕರಜಗಿ: ಸಂಸ್ಕøತಿ ಕೃತಿ ಲೋಕಾರ್ಪಣೆಗೊಳಿಸಿ ಅಭಿಮತ

                 ಬೆಂಗಳೂರು: ಆಧುನಿಕ ಶಿಕ್ಷಣದಲ್ಲಿ ಔನ್ನತ್ಯ ಪಡೆದವರಿಗೆಲ್ಲ ಸಂಸ್ಕøತಿ ಇರುತ್ತದೆ ಎಂದು ಹೇಳಲಾಗದು. ಜೀವನಾನುಭವದ ಸಮಗ್ರ ರೂಪವಾಗಿ ಸಂಸ್ಕøತಿ ರೂಪುಗೊಳ್ಳುತ್ತದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅಭಿಪ್ರಾಯ ವ್ಯಕ್ತಪಡಿಸಿದರು.

                     ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ  ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಭಾಗವಾಗಿ ಬುಧವಾರ ಸಂಜೆ ಕನ್ನಡ ಸಾರಸ್ಯತ ಲೋಕದ ಹಿರಿಯ ಸಾಹಿತಿಗಳ ವಿವಿಧ ಬರಹಗಳನ್ನೊಳಗೊಂಡ ‘ಸಂಸ್ಕøತಿ’ ಕೃತಿ ಲೋಕಾರ್ಪಣೆಗೈದು ಮಾತನಾಡಿದರು.


                ಜೀವನದ ಅನುಭವಗಳನ್ನು ಅರಗಿಸಿಕೊಂಡು ನಡವಳಿಕೆ ರೂಪದಲ್ಲಿ ಪ್ರಕಟಗೊಳ್ಳುವುದೇ ಸಂಸ್ಕøತಿಯಾಗಿದೆ. ಪ್ರತಿಯೊಬ್ಬರ ಅನುಭವಗಳೂ ಭಿನ್ನ-ಭಿನ್ನವಾಗಿದ್ದು ಪರರ ನೋವು-ನಲಿವುಗಳನ್ನು ತನ್ನದೆಂದು ಭಾವಿಸಿ ಪರಸ್ಪರ ಸಾಮರಸ್ಯದಿಂದ ಎಲ್ಲರನ್ನೊಳಗೊಂಡ ದೈನಂದಿನ ಬದುಕಿನ ನೆಮ್ಮದಿಯ ಬದುಕು ಸಂಸ್ಕøತಿಯ ಶ್ರೀಮಂತಿಕೆಯಾಗಿದೆ ಎಂದು ಅವರು ತಿಳಿಸಿದರು. 


      ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ವಾಹಿನಿಯ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಇಂದಿನ ದಿನಮಾನದಲ್ಲಿ ಜೈಲು ಸಂಸ್ಕøತಿ ಹೊಸ ಕಲ್ಪನೆಯೊಂದಿಗೆ ವೈಭವೀಕರಣಗೊಳ್ಳುತ್ತಿರುವುದು ಆತಂಕಮೂಡಿಸಿದೆ. ಜೈಲಿಗೆ ತೆರಳಿ ಮರಳುವವರನ್ನು ಸಂಭ್ರಮದಿಂದ ಸ್ವಾಗತಿಸುವಂತಹ ಸಂಸ್ಕøತಿಗೆ ವಿರುದ್ದವಾದ ವಿಕೃತಿ ಬೆಳೆಯುತ್ತಿದೆ. ನವ ಸಮಾಜಕ್ಕೆ ಇಂತಹ ಪ್ರಕ್ರಿಯೆಗಳು ತೋರಿಸುವ ಗುರುತುಗಳು ಕಳವಳಕಾರಿಯಾದುದು. ಈ ನಿಟ್ಟಿನಲ್ಲಿ ಧರ್ಮ, ಪಕ್ಷ, ರಾಜಕೀಯಗಳಿಗೆ ಸಂಸ್ಕøತಿ ಥಳುಕುಹಾಕಿಕೊಳ್ಳುತ್ತಿರುವುದು ಅಪಸವ್ಯಗಳಾಗಿ ಸಾಮಾಜಿಕ ವ್ಯವಸ್ಥೆಯ ಅಸ್ಥಿರತೆಗೆ ಕಾರಣವಾಗುವುದೆಂದು ಅವರು ವಿಶ್ಲೇಶಿಸಿದರು. 

       ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ ಹೆಗ್ಡೆ ಉಪಸ್ಥಿತರಿದ್ದರು. ಸಾಹಿತ್ಯ ವಿಭಾಗದ ಸಂಯೋಜಕರಾದ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕ ನಾಡೋಜ ಎಸ್.ಆರ್.ರಾಮಸ್ವಾಮಿ, ಮಾಸ್ತಿ ಟ್ರಸ್ಟ್ ನ ಆನಂದ್ ಮೊದಲಾದವರು ಭಾಗವಹಿಸಿದ್ದರು. 

     ಪುಸ್ತಕ ಹಬ್ಬದ ಮೊದಲ ದಿನವೇ ಓದುಗರು, ಸಾಹಿತ್ಯಾಭಿಮಾನಿಗಳಿಂದ ಮುಕ್ತ ಬೆಂಬಲ ವ್ಯಕ್ತವಾಗಿದ್ದು, ನೂರಾರು ಸಂಖ್ಯೆಯ ಜನರು ಪುಸ್ತಕಗಳನ್ನು ಕೊಳ್ಳಲು, ವೀಕ್ಷಿಸಲು ಆಗಮಿಸಿದ್ದರು. ಕನ್ನಡ ಸಾರಸ್ವತ ಲೋಕದ ಹಿರಿಯ ತಲೆಮಾರಿನ ಸಾಹಿತಿಗಳ ಜೊತೆಗೆ ಹೊಸ ತಲೆಮಾರಿನ ಲೇಖಕರ ವರೆಗೂ ಸಾವಿರಾರು ಪುಸ್ತಕಗಳು ಪ್ರದರ್ಶನ-ಮಾರಾಟದಲ್ಲಿ ಗಮನ ಸೆಳೆದವು. ಪುಟಾಣಿಗಳ ಡ್ರಾಯಿಂಗ್ ರೈಮ್ಸ್ ಗಳಿಂದ ತೊಡಗಿ, ರಾಮಾಯಣ, ಮಹಾಭಾರತ, ಸನಾತನ ಸಂಸ್ಕøತಿಗಳ ವಿವಿಧ ಆಯಾಮಗಳ ಉದ್ಗ್ರಂಥಗಳು, ಅಧ್ಯಯನ-ಪ್ರವಾಸ ಕಥನಗಳು, ಚಿಂತನ-ಮಂಥನಗಳ ಹಲವು ನೂರು ಕೃತಿಗಳು ಮಾರಾಟಕ್ಕಿರಿಸಲಾಗಿದೆ. ಒಪ್ಪ-ಓರಣ ವ್ಯವಸ್ಥೆಗಳು ಹಾಗೂ ಕೃತಿಗಳ ಮಾಹಿತಿ ನೀಡಲು ಸ್ವಯಂಸೇವಕರ ತಂಡ ಪುಸ್ತಕಾಸಕ್ತರ ಉತ್ಸಾಹವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries