ಕಾಸರಗೋಡು: ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತಿರುವುದಾಗಿ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ. ಅವರು ಬಾಯಾರು ಪ್ರಶಾಂತಿ ವಿದ್ಯಾಲಯ ವಠಾರದಲ್ಲಿ ನೂತನವಾಗಿ ನಿರ್ಮಿಸಿದ ಈಜುಕೊಳ ಉದ್ಘಾಟಿಸಿ ಮಾತನಾಡಿದರು.
ಪೆಲತ್ತಡ್ಕ ರಾಮಕೃಷ್ಣ ಭಟ್ ಸಮರಂಭದ ಅಧ್ಯಕ್ಷತೆ ವಹಿಸಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಹಿರಣ್ಯ ಮಹಾಲಿಂಗ ಭಟ್, ಪ್ರಾಂಶುಪಾಲ ವಾಮನನ್ ಉಪಸ್ಥಿತರಿದ್ದರು. ವಸತಿ ನಿಲಯದ ನಿಲಯ ಪಾಲಕ ಕೃಷ್ಣ ಪ್ರಸಾದ್ ಸ್ವಾಗತಿಸಿದರು. ಇಂಗ್ಲೀಷ್ ಭಾಷಾ ಶಿಕ್ಷಕ ಶ್ರೀ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಗಣಿತ ಪ್ರಾಧ್ಯಾಪಕ ಚಂದ್ರಶೇಖರ್ ವಂದಿಸಿದರು.
ನಂತರ ಮಕ್ಕಳಿಂದ ಈಜು ಸ್ಪರ್ಧೆ ನಡೆಯಿತು. ಈ ಸಂದರ್ಭ ಈಶ್ವರ್ ಮಲ್ಪೆ ಮತ್ತು ಮತ್ತು ಸಂಗಡಿಗರಿಂದ ಸ್ಕ್ಯೂಬಾ ಡೈವ್‍ನ ಪ್ರಾಯೋಗಿಕ ಪ್ರದರ್ಶನ ನಡೆಸಿಕೊಟ್ಟರು.


