ಮುಳ್ಳೇರಿಯ: ಭಾರತೀಯ ಹಿಪ್ ಹ್ಯಾಪ್ ಜಗತ್ತಿನ ಅತೀ ದೊಡ ರ್ಯಾಪರ್ಸ್ ಗುಂಪಾದ ಟೀಮ್ ಚಿರಾಯು ಬೆಂಗಳೂರು ತಂಡವು ಕಳೆದ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಪರ್ದೆಯಲ್ಲಿ ಐಕೋನಿಕ್ ಬುಕ್ ಆಫ್ ರೆಕಾರ್ಡ್ ಪದವಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಗುಂಪಿನ ಪ್ರಮುಖರಾದ ಚಿರಾಯು ಅವರು ಜಾಗತಿಕ ಮಟ್ಟದ ದಾಖಲೆಗಾಗಿ ಹೆಚ್ಚಿನ ಪ್ರಯತ್ನ ಪಡುತ್ತಿರುವುದು, ರ್ಯಾಪ್ ಪ್ರಿಯರಿಗೆ ಖುಷಿಯನ್ನು ನೀಡಿದೆ. ಗಡಿನಾಡು ಕಾಸರಗೋಡಿನ ಕನ್ನಡಿಗ ಶಶಾಂಕ್ ರೈ ಕಳ್ವಾಜೆ (ರೈಸನ್) ಈ ತಂಡದಲ್ಲಿ ಜತೆಗಿದ್ದು ಒಂದಷ್ಟು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ ಎನ್ನುವುದು ಕಾಸರಗೋಡಿಗೇ ಹೆಮ್ಮೆಯ ವಿಚಾರವಾಗಿದೆ. ವಿಶೇಷವೆಂದರೆ, ಕನ್ನಡದ ಮೊದಲ ರ್ಯಾಪರ್ ಹಾಗೂ ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಾಳು, ಹೆಸರಾಂತ ಚಲನಚಿತ್ರ ನಟ ರಾಕೇಶ್ ಅಡಿಗ ಈ ತಂಡದಲ್ಲಿ ಭಾಗಿಯಾಗಿದ್ದರನ್ನುವುದು ಗಮನಾರ್ಹ ವಿಚಾರವಾಗಿದೆ.
ಐಕಾನಿಕ್ ಬುಕ್ ಆಫ್ ರೆಕಾರ್ಡ್ :
ಈ ತಂಡವು ಐಕಾನಿಕ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಸ್ಥಾನವನ್ನು ಪಡೆಯುವುದಕ್ಕಾಗಿ ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ 43ಜನ ಗಾಯಕರು ಹಾಡಿಮುಗಿಸಿದ್ದಾರೆ. ರೀಟೇಕ್ ಇಲ್ಲದೆ ಹಾಡಿರುವುದು ವಿಶೇಷವಾಗಿದೆ. ಕಳೆದ ವರ್ಷವೂ ಇದೇ ಚಿರಾಯು ತಂಡ ರ್ಯಾಪ್ ಗಾಯನದಲ್ಲಿ ಕರ್ನಾಟಕ ಬುಕ್ಕಾಫ್ ರೆಕಾರ್ಡ್ ದಾಖಲೆಯನ್ನು ಮುಡಿಗೇರಿಸಿತ್ತು. ತಂಡದ ಸಾಧಕರಿಗೆ ಅಭಿನಂದನೆಯ ಮಹಾಪೂರ ಹರಿದುಬಂದಿದೆ.
ಗಡಿನಾಡ ಪ್ರತಿಭೆ ಶಶಾಂಕ್ ರೈ ಕಳ್ವಾಜೆ :
ರೈಸÀನ್ ಎಂದೇ ಕರೆಸಿಕೊಳ್ಳುತ್ತಿರುವ ಗಡಿನಾಡ ಪ್ರತಿಭಾನ್ವಿತ ಶಶಾಂಕ್ ರೈ ಕಳ್ವಾಜೆ ತಂಡದಲ್ಲಿ ಉತ್ತಮ ಕಲಾವಿದನಾಗಿ ಹೊರಹೊಮ್ಮಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಸೌಂಡ್ ಇಂಜಿನಿಯರಿಂಗ್ ತರಬೇತಿಯನ್ನು ಮಾಡುತ್ತಿದ್ದಾರೆ. ವಿದ್ಯಾಶ್ರೀ ಮುಳ್ಳೇರಿಯದಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಡಿಪ್ಲೊಮಾ ತರಬೇತಿಯನ್ನು ಪೂರ್ತಿಗೊಳಿಸಿದ್ದರು. ಮುಳ್ಳೇರಿಯ ಕಿನ್ನಿಂಗಾರು ಕಳ್ವಾಜೆ ಬಾಲಕೃಷ್ಣ (ದಯಾನಂದ) ರೈ ಹಾಗೂ ಮಂಜುಳಾ ಇವರ ಪುತ್ರನಾಗಿದ್ದಾನೆ.

.jpg)
-%20Shashank%20Rai.jpg)
.jpg)
.jpg)
