ಕುಂಬಳೆ: ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದ 2023-24ನೇ ವರ್ಷದಲ್ಲಿ ಎರಡನೇ ಪ್ರತಿಭಾ ಭಾರತಿ ಕಾರ್ಯಕ್ರಮ ಬುಧವಾರ ಜರುಗಿತು. ಬೆಂಗಳೂರಿನ ಸಂಸ್ಕಾರ್ ಸಿಸ್ಟಮ್ ನ ಕೃಷ್ಣ ಪ್ರಸಾದ್ ಅಮ್ಮಂಕಲ್ಲು ಮುಖ್ಯ ಅತಿಥಿಗಳಾಗಿ ಮಾತನಾಡಿ ಶ್ರೀಭಾರತೀವಿದ್ಯಾಪೀಠದ ವಿದ್ಯಾರ್ಥಿಗಳಾಗುವುದೇ ವಿಶೇಷತೆ. ಸಂಸ್ಕಾರದೊಂದಿಗೆ ಹಲವು ಪ್ರತಿಭೆಗಳ ಆಗರವಾಗಲು ಅವಕಾಶ ವಿಶಾಲವಾಗಿದೆ ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚೆಕ್ಕಣಿಕೆ ಬಾಲಸುಬ್ರಹ್ಮಣ್ಯ ಭಟ್ ಮಾತನಾಡಿ ಮಕ್ಕಳಿಂದಲೇ ಮಕ್ಕಳಿಗಾಗಿ ಮಾಡಿಸುವ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಎಲ್. ಕೆ .ಜಿ. ಮಕ್ಕಳಿಂದ ತೊಡಗಿ ಹತ್ತನೆ ತರಗತಿ ವರೆಗಿನ ಎಲ್ಲಾ ಮಕ್ಕಳಿಂದ ವಿವಿಧ ಚಟುವಟಿಕೆಗಳು ಪ್ರದರ್ಶನಗೊಂಡವು. ಹತ್ತನೆ ತರಗತಿ ವಿದ್ಯಾರ್ಥಿ ಕುಶನ್ ಕುಮಾರ್ ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ ಹಾಗೂ ಸಹ ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕøತ ಅಧ್ಯಾಪಕ ಬಾಲಕೃಷ್ಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಶುಭಾಶಂಸನೆಗೈದರು. ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಆರಂಭಗೊಂಡ ಸಮಾರಂಭದಲ್ಲಿ ಎಂಟನೆಯ ತರಗತಿ ಆದಿತ್ಯ ಸ್ವಾಗತಿಸಿದನು.


.jpg)
