ಮುಳ್ಳೇರಿಯ: ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ 18 ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿ ಮತ್ತು ಹಿರಿಯ ಪ್ರಾಥಮಿಕ- ಹೈಸ್ಕೂಲ್ ವಿಭಾಗಗಳ ಕಛೇರಿಯನ್ನು ಸಂಪರ್ಕಿಸುವ ಮೂಲಕ ಶಾಲಾ ರೇಡಿಯೋ ಕಾರ್ಯಾರಂಭ ಮಾಡಿದೆ. 1975-76ರ ಎಸ್.ಎಸ್.ಎಲ್.ಸಿ. ತಂಡದ ಹಳೆ ವಿದ್ಯಾರ್ಥಿಗಳು ಮಕ್ಕಳ ಸೃಜನಶೀಲತೆಗಾಗಿ ರೇಡಿಯೋ ಅಭಿವ್ಯಕ್ತಿ ವ್ಯವಸ್ಥೆಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
ತರಗತಿಗಳ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಮೊದಲೇ ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗುತ್ತದೆ. ನೇರ ಪ್ರಸಾರವೂ ಇರುತ್ತದೆ. ತರಗತಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಚಟುವಟಿಕೆಯನ್ನು ಆಯೋಜಿಸಲಾಗುತ್ತದೆ.
ಶಾಲಾ ಮುಖ್ಯೋಪಾಧ್ಯಾಯ ಸಜೀವನ್ ಮದಪರಂಬತ್ ಉದ್ಘಾಟಿಸಿದರು. ಮುಳಿಯಾರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಖಾಲಿದ್ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಅಂದಿನ ಭೌತಶಾಸ್ತ್ರ ಶಿಕ್ಷಕ ಸುಕುಮಾರನ್ ಮಾಸ್ತರ್ ಮತ್ತು ಶಿಕ್ಷಕ ಪ್ರಶಸ್ತಿ ವಿಜೇತ ಉಣ್ಣಿಕೃಷ್ಣನ್ ಅಣಿಂಜ ಅವರನ್ನು ಸನ್ಮಾನಿಸಲಾಯಿತು. ಪಿಟಿಎ ಅಧ್ಯಕ್ಷ ಬಿ.ಎಂ.ಪ್ರದೀಪ್, ವಿಎಚ್‍ಎಸ್‍ಇ ವಿಭಾಗದ ಪ್ರಾಂಶುಪಾಲ ಸುಚೀಂದ್ರನಾಥ್, ಮುಖ್ಯಶಿಕ್ಷಕ ಎ.ಎಂ.ಅಬ್ದುಲ್ ಸಲಾಂ, ಎಸ್‍ಆರ್‍ಜಿ ಸಂಚಾಲಕ ಕೆ. ನಿಮಿಷ ಬಾಬು, ಮಾಧವನ್ ಕೊಟ್ಟಂಗುಳಿ, ಎಂ. ಕುಮಾರನ್ ನಂಬಿಯಾರ್ ಮತ್ತು ರಾಘವನ್ ನಾಯರ್ ನೆಯ್ಯಂಕಾಯ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಸಂಚಾಲಕ ನಾರಾಯಣನ್ ಮಂಚಕಲ್ ಸ್ವಾಗತಿಸಿ, ಎಂ.ಸಿ. ನಾರಾಯಣಿಕುಟ್ಟಿ ವಂದಿಸಿದರು.

.jpeg)
