HEALTH TIPS

ಮಹಿಳೆ ಶಿಕ್ಷಣ ಪಡೆದರೆ ಜನನ ಇಳಿಕೆ: ಬಿಹಾರ ಸಿಎಂ ನಿತೀಶ್‌ ಹೇಳಿಕೆಗೆ ಬಿಜೆಪಿ ಟೀಕೆ

                ಟ್ನಾ: ಮಹಿಳೆಯರು ಶಿಕ್ಷಣ ಹೊಂದಿರುವುದು ಜನಸಂಖ್ಯೆ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿಕೆ ಬಿಹಾರ ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ಕಾರಣವಾಯಿತು.

                 ಈ ವಿಷಯವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷ ಬಿಜೆಪಿ, ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಸಂಗವೂ ನಡೆಯಿತು.

                ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರು ಶಿಕ್ಷಣ ಹೊಂದಿರುವುದು ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದ ನಿತೀಶ್‌ ಕುಮಾರ್‌, 'ಒಬ್ಬ ಸುಶಿಕ್ಷಿತ ಮಹಿಳೆಯು ಗಂಡ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ನಿರ್ಬಂಧ ಹೇರಬಲ್ಲವಳಾಗಿರುತ್ತಾಳೆ' ಎಂದು ವಿವರಿಸಿದರು.

               'ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯವೇ ಕಾರಣವಾಗುತ್ತದೆ. ಆದರೆ, ಶಿಕ್ಷಣ ಪಡೆದ ಮಹಿಳೆಯು ಪತಿಯನ್ನು ನಿರ್ಬಂಧಿಸುವ ಕುರಿತು ತಿಳಿದುಕೊಂಡಿರುತ್ತಾಳೆ. ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಮಹಿಳೆಯರು ಶಿಕ್ಷಣ ಪಡೆದಿರುವುದೇ ಕಾರಣ' ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.

                     'ಇದನ್ನು ನೀವೂ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತೀರಿ. ಈ ಹಿಂದೆ ಫಲವತ್ತತೆ ಪ್ರಮಾಣ 4.3ರಷ್ಟಿತ್ತು. ಈಗ 2.9ರಷ್ಟಿದ್ದು, ಶೀಘ್ರವೇ ಈ ಪ್ರಮಾಣ 2ರ ಗಡಿ ತಲುಪಲಿದೆ' ಎಂದು ಪತ್ರಕರ್ತರನ್ನು ಉದ್ದೇಶಿಸಿ ಅವರು ಹೇಳಿದರು.

               ಈ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷ ಬಿಜೆಪಿ ನಾಯಕರು, 'ಸಂತಾನ ಪ್ರಕ್ರಿಯೆ ಕುರಿತು ಸದನದಲ್ಲಿ ಮಾತನಾಡುವ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್‌ ರಾಜ್ಯದ ಮಹಿಳೆಯರು ತಲೆತಗ್ಗಿಸುವಂತೆ ಮಾಡಿದ್ದಾರೆ' ಎಂದು ಹರಿಹಾಯ್ದರು.

              ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕಿಯರಾದ ಗಾಯತ್ರಿ ದೇವಿ ಹಾಗೂ ಸ್ವೀಟಿ ಹೆಂಬ್ರಮ್, 'ನಿತೀಶ್‌ ಕುಮಾರ್‌ ಅವರಿಗೆ ವಯಸ್ಸಾಗಿದೆ. ಹೀಗಾಗಿ ಅವರು ಸಭ್ಯತೆಯನ್ನು ಕಳೆದುಕೊಂಡಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

                   ವಿಧಾನಪರಿಷತ್‌ ಸದಸ್ಯರೂ ಆಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಾಮ್ರಾಟ್ ಚೌಧರಿ, 'ಬಿಹಾರದ 6.5 ಕೋಟಿ ಮಹಿಳೆಯರ ಗೌರವಕ್ಕೆ ನಿತೀಶ್‌ಕುಮಾರ್‌ ಧಕ್ಕೆ ತಂದಿದ್ದಾರೆ. ತಮ್ಮ ಮಾತು ಮತ್ತು ಕೃತಿಗಳಲ್ಲಿ ಎಚ್ಚರವಹಿಸುವಂತೆ ಅವರಿಗೆ ನಾನು ಕೈಮುಗಿದು ಕೇಳುತ್ತೇನೆ' ಎಂದು ಹೇಳಿದ್ದಾರೆ.

               'ನಿತೀಶ್ ಕುಮಾರ್‌ ಇಂತಹ ನಡವಳಿಕೆ ತೋರಿರುವುದು ಇದೇ ಮೊದಲೇನಲ್ಲ. ಇವರು ತಮ್ಮ ನಡೆಯನ್ನು ತಿದ್ದಿಕೊಳ್ಳದಿದ್ದಲ್ಲಿ ಬಾಲಕಿಯರು, ಮಹಿಳೆಯರು ನಿತೀಶ್‌ ಕುಮಾರ್‌ ಪಾಲ್ಗೊಳ್ಳುವ ಕಾರ್ಯಕ್ರಮಗಳಿಂದ ದೂರ ಉಳಿಯುವ ದಿನಗಳು ದೂರ ಇಲ್ಲ' ಎಂದೂ ಹೇಳಿದ್ದಾರೆ.

ನಿತೀಶ್‌ ರಾಜೀನಾಮೆಗೆ ಬಿಜೆಪಿ ಒತ್ತಾಯ

                    ನವದೆಹಲಿ: ಮಹಿಳೆಯರು ಶಿಕ್ಷಣ ಹೊಂದಿರುವುದು ಜನಸಂಖ್ಯೆ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಕೀಳು ಅಭಿರುಚಿ ಹೇಳಿಕೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಅಶ್ವಿನಿಕುಮಾರ್‌ ಚೌಬೆ ಮಂಗಳವಾರ ಆಗ್ರಹಿಸಿದ್ದಾರೆ.

               'ನಿತೀಶ್ ಕುಮಾರ್‌ ಅವರ ಈ ಹೇಳಿಕೆಯು ಅಶ್ಲೀಲವಾಗಿದೆ. ಅವರಲ್ಲಿರುವ ಸ್ತ್ರೀಯರ ಕುರಿತ ದ್ವೇಷ ಹಾಗೂ ಪುರುಷ ಪ್ರಧಾನ ಮನೋಭಾವವನ್ನು ತೋರುತ್ತದೆ' ಎಂದು ಟೀಕಿಸಿದ್ದಾರೆ.

'ವಿಧಾನಸಭೆಯಲ್ಲಿ ಇಂತಹ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುವುದನ್ನು ಇದು ತೋರಿಸುತ್ತದೆ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವೈದ್ಯರ ಸಲಹೆ ಪಡೆಯಬೇಕು' ಎಂದೂ ಚೌಬೆ ಹೇಳಿದ್ದಾರೆ.


                    -ರೇಖಾ ಶರ್ಮಾ, ಅಧ್ಯಕ್ಷೆ, ರಾಷ್ಟ್ರೀಯ ಮಹಿಳಾ ಆಯೋಗನಿತೀಶ್‌ ಹೇಳಿಕೆ ಘೋರವಾದುದು. ಮಹಿಳೆಯರ ಆಯ್ಕೆ, ಹಕ್ಕುಗಳ ಕುರಿತು ಸಂವೇದನಾರಹಿತವಾಗಿದೆ.-ತೇಜಸ್ವಿ ಯಾದವ್, ಆರ್‌ಜೆಡಿ ಮುಖಂಡನಿತೀಶ್‌ಕುಮಾರ್‌ ಹೇಳಿಕೆಯಲ್ಲಿ ಆಕ್ಷೇಪಾರ್ಹ ಅಂಶಗಳಿಲ್ಲ. ಲೈಂಗಿಕ ಶಿಕ್ಷಣದ ಭಾಗವಾಗಿ ಈ ವಿಷಯಗಳನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries