ಕೊಚ್ಚಿ: ಶಬರಿಮಲೆ ಪ್ರತಿಭಟನೆ ಸಂಬಂಧಿಸಿದಂತೆ ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ.ಪಿ. ಶಶಿಕಲಾ ಟೀಚರ್ ವಿರುದ್ಧದ ಪ್ರಕರಣ ಮತ್ತು ಮುಂದಿನ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಅಡ್ವ. ವಿ. ಸಜಿತ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ವಿ. ಕುಂಞÂ್ಞ ಕೃಷ್ಣನ್ ಅವಲೋಕಿಸಿ ಈ ಆದೇಶ ನೀಡಿದ್ದಾರೆ. ಜನವರಿ 3, 2019 ರಂದು, ಕೋಝಿಕ್ಕೋಡ್‍ನ ಚೇವಾಯೂರ್ ಪೋಲೀಸ್ ಶಶಿಕಲಾ ಟೀಚರ್ ವಿರುದ್ಧ ಪೋಲೀಸ್ ವಾಹನದ ಮೇಲೆ ದಾಳಿ ಮಾಡಿ, ಕಿಟಕಿ ಗಾಜು ಹಾನಿಗೊಳಿಸಿದ, ಪೋಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅಕ್ರಮವಾಗಿ ಗುಂಪು ಸೇರಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯನ್ನು ಶಬರಿಮಲೆಗೆ ಕರೆದೊಯ್ದ ಹರತಾಳದಲ್ಲಿ ಭಾಗವಹಿಸಿದ್ದು ಅಪರಾಧವಲ್ಲ ಎಂಬ ವಾದವನ್ನು ತೀರ್ಪು ಒಪ್ಪಿಕೊಂಡಿದೆ.
ಅವರು ಯಾವುದೇ ಅಪರಾಧ ಎಸಗಿದ್ದಾರೆ ಎಂಬುದಕ್ಕೆ ಪುರಾವೆ ಇಲ್ಲ. ಮನವಿಗಳು ಮತ್ತು ದಾಖಲೆಗಳ ಪರಿಶೀಲನೆಯಿಂದ, ಅವರು ಯಾವುದೇ ಆಪಾದಿತ ಅಪರಾಧಗಳನ್ನು ಮಾಡಿರುವುದು ಕಂಡುಬಂದಿಲ್ಲ. ಪ್ರಕರಣವು ಕಾನೂನಿನ ದುರುಪಯೋಗವಾಗಿದೆ ಎಂದುಇ ನ್ಯಾಯಾಲಯ ತಿಳಿಸಿದೆ.
ಈ ಪರಿಸ್ಥಿತಿಯಲ್ಲಿ ಚೇವಾಯೂರ್ ಪೋಲೀಸರು ಕೋಝಿಕ್ಕೋಡ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಸಿದ್ದ ಪ್ರಕರಣ ಮತ್ತು ಮುಂದಿನ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಘೋಷಿಸಿದೆ.





