ಕಾಸರಗೋಡು: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಕಾಸರಗೋಡಿನ ಕೇರ್‍ವೆಲ್ ಆಸ್ಪತ್ರೆಯಲ್ಲಿ ಕೇರ್‍ವೆಲ್ ಪ್ರೈಮರಿ ಸ್ಟ್ರೋಕ್ ಸೆಂಟರ್ ಆರಂಭಿಸಲಾಗಿದೆ ಎಂದು ಸಂಸ್ಥೆ ಪದಾಧಿಕಾರಿಗಳು ಸಉದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಾಶ್ರ್ವವಾಯು ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇರುವ ಆಸ್ಪತ್ರೆಯ ಕೊರತೆ ಮನಗಂಡು ಕಾಸರಗೋಡು ಕೇರ್‍ವೆಲ್ ಸಂಸ್ಥೆಯಲ್ಲಿ ಈ ವ್ಯಸ್ಥೆ ಆರಂಭಿಸಲಾಗಿದೆ. ಖ್ಯಾತ ವೈದ್ಯ ಡಾ.ಜಯದೇವ್ ಕಂಗಿಲ ವೈದ್ಯಕೀಯ ನಿರ್ದೇಶಕರಾಗಿ ಮತ್ತು ನ್ಯೂರಾಲಜಿಸ್ಟ್ ಡಾ.ಮುಹಮ್ಮದ್ ಶಮೀಮ್ ನೇತೃತ್ವದಲ್ಲಿ ನ್ಯೂರೋ ತುರ್ತು ವಿಭಾಗ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಮಹಮ್ಮದ್ ಅಫ್ಜಲ್, ಡಾ.ಜಯದೇವ್ ಕಂಗಿಲ, ಡಾ. ಆದರ್ಶ ಹೇರ್ಲ, ಡಾ. ಮುಹಮ್ಮದ್ ಶಮೀಮ್, ಡಾ. ಚಿತ್ತರಂಜನ್, ಡಾ. ಅಹಮದ್ ಫಯಾಜ್, ಡಾ. ಫೈಸಲ್ ಹನೀಫ್, ಡಾ.ನೌಫಲ್, ಡಾ. ಪವಮಾನ್ ಪಿ.ಎಸ್. ಉಪಸ್ಥಿತರಿದ್ದರು.

