ಕೀವ್: ಉಕ್ರೇನ್ ಮೇಲೆ ಅತಿದೊಡ್ಡ ವಾಯು ದಾಳಿ ನಡೆಸಿರುವ ರಷ್ಯಾ, 158 ಡ್ರೋನ್ಗಳು ಸೇರಿದಂತೆ ಹಲವು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ಕೀವ್: ಉಕ್ರೇನ್ ಮೇಲೆ ಅತಿದೊಡ್ಡ ವಾಯು ದಾಳಿ ನಡೆಸಿರುವ ರಷ್ಯಾ, 158 ಡ್ರೋನ್ಗಳು ಸೇರಿದಂತೆ ಹಲವು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ಉಕ್ರೇನ್ನ ನಿರ್ಣಾಯಕ ಮೂಲಸೌಕರ್ಯ, ಕೈಗಾರಿಕೆ ಮತ್ತು ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾ ದಾಳಿ ನಡೆಸಿದೆ.
ಉಕ್ರೇನ್ ಪಡೆಗಳು ರಷ್ಯಾದ 27 ಡ್ರೋನ್ಗಳು ಮತ್ತು 87 ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ನ ಸೇನಾ ಮುಖ್ಯಸ್ಥರು ಟೆಲಿಗ್ರಾಂ ಸಂದೇಶದಲ್ಲಿ ತಿಳಿಸಿದ್ದಾರೆ.
ಇದೊಂದು ಬೃಹತ್ ವೈಮಾನಿಕ ದಾಳಿ ಎಂದು ಉಕ್ರೇನ್ ವಾಯುಪಡೆಯ ಮುಖ್ಯಸ್ಥರು ವಿವರಿಸಿದ್ದಾರೆ.