ಕಾಸರಗೋಡು: ಕೇರಳ ಲೋಕಸೇವ ಆಯೋಗ(ಪಿಎಸ್‍ಸಿ)ಕೇರಳದ ವಿವಿಧ ಇಲಾಖೆಗಳಲ್ಲಿ ತೆರವಾಗಲಿರುವ ಎಲ್‍ಡಿ ಕ್ಲರ್ಕ್, ಮಹಿಳಾ ಅಬಕಾರಿ ಅಧಿಕಾರಿ(ಟ್ರೈನಿ), ಯುಪಿ ಶಾಲಾ ಶಿಕ್ಷಕರು(ಕನ್ನಡ), ಲಾಸ್ಟ್ ಗ್ರೇಡ್ ಸರ್ವೆಂಟ್ಸ್ ಅಸಿಸ್ಟೆಂಟ್(ಕನ್ನqಟ್ಮೊದಲಾದ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಎಲ್‍ಡಿ ಕ್ಲರ್ಕ್ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್ಸೆಸೆಲ್ಸಿ ಉತ್ತೀರ್ಣರಾಗಿರಬೇಕಾಗಿದೆ. ಕೇರಳ ಲೋಕಸೇವಾ ಆಯೋಗದ ಪರೀಕ್ಷೆ, ಇಂಟರ್‍ವ್ಯೂ, ಅರ್ಜಿ ಸಲ್ಲಿಕೆ ವಿಧಾನ, ಪರೀಕ್ಷಾ ತರಬೇತಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ಶಿಬಿರ ಡಿ. 17ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಬ್ಯಾಂಕ್ ರಸ್ತೆಯ ವಿನಯಮೆಡಿಕಲ್ ಕಟ್ಟಡದಲ್ಲಿರುವ ಶಿಕ್ಷಣ-ಉದ್ಯೋಗ ಮಾಹಿತಿ ಕೇಂದ್ರದಲ್ಲಿ ನಡೆಯಲಿರುವುದು. ಆಸಕ್ತರು ಮಾಹಿತಿ ಕೇಂದ್ರದ ನಿರ್ದೇಶಕ , ಪಿಎಸ್‍ಸಿ ಅಂಡರ್‍ಸೆಕ್ರೆಟರಿಯಾಗಿ ನಿವೃತ್ತರಾಗಿರುವ ಗಣೇಶ್ ಪ್ರಸಾದ್ ಪಾಣೂರು(ಮೊಬೈಲ್-9496237601)ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.




