ನವದೆಹಲಿ: ಹೆಚ್ಚುತ್ತಿರುವ ಕರೋನಾ ರೂಪಾಂತರ ಭೀತಿಯ ಮಧ್ಯೆ ಅಂತಹ ವೈರಸ್‍ಗಳ ವಿರುದ್ಧ ಹೋರಾಡಲು ಸಾಕಷ್ಟು ವ್ಯಾಕ್ಸಿನೇಷನ್‍ಗಳನ್ನು ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜೆಎನ್ 1 ವೈರಸ್ ವಿರುದ್ಧ ಹೋರಾಡಲು ಓಮಿಕ್ರಾನ್ ಲಸಿಕೆ ಹಾಕಿದರೆ ಸಾಕು ಎಂದು ಏಮ್ಸ್‍ನ ಮಾಜಿ ನಿರ್ದೇಶಕ ಹಾಗೂ ಹಿರಿಯ ಶ್ವಾಸಕೋಶ ತಜ್ಞ ಡಾ. ರಣದೀಪ್ ಗುಲೇರಿಯಾ ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
“ವೈರಸ್ ಗಳಲ್ಲಿನ ರೂಪಾಂತರಗಳು ಬದಲಾಗುತ್ತಿವೆ, ಅವು ಬಹಳ ಬೇಗನೆ ರೂಪಾಂತರಗೊಳ್ಳುತ್ತವೆ. ಆದ್ದರಿಂದ, ದೇಶದ ಜನರ ರೋಗನಿರೋಧಕ ಶಕ್ತಿಯಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಜೊತೆಗೆ ಲಸಿಕೆಗಳಲ್ಲಿ ಬದಲಾವಣೆಗಳನ್ನು ಪರಿಶೀಲಿಸಲಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಲಸಿಕೆ ಒಮಿಕ್ರೋನ್ ಜೆಎನ್ 1 ಗೆ ಪರಿಣಾಮಕಾರಿಯಾಗಿದೆ ಎಂದು ಡಾ. ರಣದೀಪ್ ಗುಲೇರಿಯಾ ಹೇಳಿರುವರು.
INSACOG ನ ಮುಖ್ಯಸ್ಥ ಡಾ. ಎನ್‍ಕೆ ಅರೋರಾ ಕೂಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅನಾರೋಗ್ಯದ ಸಂದರ್ಭದಲ್ಲಿ ಮಿತಿಮೀರಿದ ಪ್ರಮಾಣವನ್ನು ಹೊಂದಿರುವ ಔಷಧಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಮುನ್ನೆಚ್ಚರಿಕೆಗಳೊಂದಿಗೆ ಮುಂದುವರಿಯಬೇಕು ಎಂದು ಡಾ. ಅರೋರಾ ಹೇಳಿರುವರು.




.webp)
